×
Ad

ಝೀನತ್ ಭಕ್ಷ್, ಕಂಡತ್‌ಪಳ್ಳಿಯಲ್ಲಿ ಪುನಃ ಜುಮಾ ನಮಾಝ್

Update: 2020-06-12 23:06 IST

ಮಂಗಳೂರು, ಜೂ.12: ಕೊರೋನ ಲಾಕ್‌ಡೌನ್ ಬಳಿಕ ಮಂಗಳೂರಿನಲ್ಲಿ ಮೊದಲ ಜುಮಾ ನಮಾಝ್‌ನ್ನು ನಗರದ ಝೀನತ್ ಭಕ್ಷ್ ಕೇಂದ್ರ ಜುಮ್ಮಾ ಮಸೀದಿ ಹಾಗೂ ಕಂಡತ್‌ಪಳ್ಳಿ ಮಸೀದಿಗಳಲ್ಲಿ ಶುಕ್ರವಾರ ನೆರವೇರಿಸಲಾಯಿತು.

ಇಲ್ಲಿಯವರೆಗೆ ಒಟ್ಟು 11 ವಾರಗಳ ಜುಮಾ ನಮಾಝ್ ನಡೆದಿಲ್ಲ. ಲಾಕ್‌ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಶ್ರದ್ಧಾಳುಗಳು ಸುರಕ್ಷಿತ ಅಂತರ ಕಾಯ್ದು ಕೊಂಡು ಪ್ರಾರ್ಥನೆ ಸಲ್ಲಿಸಿದ್ದಾರೆ. ಸುರಕ್ಷಿತ ಅಂತರ ಕಾಯ್ದುಕೊಂಡು ನಮಾಜ್ ಮಾಡಿದ್ದರಿಂದ ಮಸೀದಿಯಲ್ಲಿ ಸ್ಥಳಾವಕಾಶದ ಸಮಸ್ಯೆ ತಲೆದೋರಿತ್ತು. ಹಾಗಾಗಿ ಮಸೀದಿಯ ಹೊರ ಆವರಣ ಹಾಗೂ ಸಮೀಪದ ರಸ್ತೆಯಲ್ಲೇ ನಿಂತು ಪ್ರಾರ್ಥನೆ ನಿರ್ವಹಿಸಿರುವುದು ಕಂಡುಬಂತು.

ತುಂಬ ಖುಷಿ ಆಯ್ತು: ‘ಜುಮ್ಮಾ ನಮಾಜ್‌ನ್ನು ವಾರಕ್ಕೊಮ್ಮೆ ನಿರ್ವಹಿಸಲಾಗುತ್ತದೆ. ಲಾಕ್‌ಡೌನ್‌ನಿಂದಾಗಿ ಜುಮ್ಮಾ ನಿರ್ವಹಿಸಲಾಗಿರಲಿಲ್ಲ. ಸದ್ಯ ಲಾಕ್‌ಡೌನ್ ಸಡಿಲಿಕೆಯ ಬಳಿಕ ನಮಾಜ್ ನಿರ್ವಹಿಸಲು ಅವಕಾಶ ದೊರೆತಿದೆ. ತುಂಬ ಖುಷಿಯಾಗಿದೆ. ಸುರಕ್ಷಿತ ಅಂತರ ಉಲ್ಲಂಘನೆಯಾಗದಂತೆ ಮಸೀದಿ ಸಮಿತಿಯವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ’ ಎಂದು ಶ್ರದ್ಧಾಳುವೊಬ್ಬರು ಪ್ರತಿಕ್ರಿಯಿಸಿದರು.

‘ಕಳೆದ ಎರಡು-ಮೂರು ತಿಂಗಳಿಂದ ಜುಮ್ಮಾದ ನಮಾಜ್‌ಗಳನ್ನು ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಜುಮ್ಮಾ ನಮಾಜ್ ಮತ್ತೆ ಆರಂಭವಾಗಿರುವುದು ಸಂತಸವಾಗಿದೆ. ಝೀನತ್ ಭಕ್ಷ್ ಜುಮ್ಮಾ ಮಸೀದಿಯಲ್ಲಿ ನಮಾಜ್ ಮಾಡಿದೆವು. ಮನೆಯಲ್ಲೇ ವುಜೂ ಮಾಡಿ ಬಂದಿದ್ದೆವು. ಮಸಲ್ಲವನ್ನೂ ತಂದಿದ್ದೆವು’ ಎಂದು ಮತ್ತೊಬ್ಬ ಶ್ರದ್ಧಾಳು ಅಭಿಪ್ರಾಯ ಹಂಚಿಕೊಂಡರು.

ಕೇಂದ್ರ ಜುಮ್ಮಾ ಮಸೀದಿ ಸೇರಿದಂತೆ ಕಂಡತ್‌ಪಳ್ಳಿ ಮಸೀದಿಯಲ್ಲೂ ನಮಾಜ್ ನಿರ್ವಹಿಸಲಾಯಿತು. ಬಹಳ ದಿನದಿಂದ ಜುಮ್ಮಾ ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಎಲ್ಲ ಮುಸ್ಲಿಮರೂ ಖುಷಿಯಾಗಿಯೇ ನಮಾಜ್ ನಿರ್ವಹಿಸಿದ್ದಾರೆ. ಈ ಸಂದರ್ಭ ಮಸೀದಿಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪ್ರತಿ ಜಿಲ್ಲೆಯಲ್ಲೂ ಮಸೀದಿಗಳನ್ನು ಸುಲಭವಾಗಿ ತೆರೆಯಲು ಸರಕಾರ ಅವಕಾಶ ಕೊಡಬೇಕು.
ಕೆ.ಅಶ್ರಫ್,
ಮಾಜಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News