×
Ad

ರೂ. 1,200 ಕೋಟಿ ಬಾಕಿ ಮೊತ್ತ ಪಡೆಯಲು ಅನಿಲ್ ಅಂಬಾನಿ ವಿರುದ್ಧ ಎನ್‍ಸಿಎಲ್‍ಟಿ ಮೊರೆ ಹೋದ ಎಸ್‍ಬಿಐ

Update: 2020-06-13 14:13 IST

ಹೊಸದಿಲ್ಲಿ: ದಿವಾಳಿತನ ಕಾನೂನಿನ ವೈಯಕ್ತಿಕ ಗ್ಯಾರಂಟಿ ಅಧಿನಿಯಮದ ಅನ್ವಯ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಂದ ರೂ. 1,200 ಕೋಟಿಗೂ ಅಧಿಕ ಬಾಕಿ ಹಣ ವಸೂಲಿ ಮಾಡುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣದಲ್ಲಿ ಅಪೀಲು ಸಲ್ಲಿಸಿದೆ. ರಿಲಯನ್ಸ್ ಕಮ್ಯುನಿಕೇಶನ್ಸ್ ಹಾಗೂ ರಿಲಯನ್ಸ್ ಇನ್‍ಫ್ರಾಟೆಲ್‍ಗೆ ನೀಡಿದ್ದ ಸಾಲಗಳಿಗೆ ಅನಿಲ್ ಅಂಬಾನಿ ವೈಯಕ್ತಿಕ ಗ್ಯಾರಂಟಿ ನೀಡಿದ್ದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಪೀಲಿಗೆ ಪ್ರತಿಕ್ರಿಯಿಸಲು ನ್ಯಾಯಾಧಿಕರಣ ಅನಿಲ್ ಅಂಬಾನಿಗೆ ಒಂದು ವಾರ ಕಾಲಾವಕಾಶ ನೀಡಿದೆ.

ಇದು ಅನಿಲ್ ಅಂಬಾನಿಯವರ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ್ದಲ್ಲ, ಬದಲು ರಿಲಯನ್ಸ್ ಕಮ್ಯುನಿಕೇಶನ್ಸ್ ಹಾಗೂ ರಿಲಯನ್ಸ್ ಇನ್‍ಫ್ರಾಟೆಲ್ ಸಂಸ್ಥೆಗಳು ಪಡೆದ ಕಾರ್ಪೊರೇಟ್ ಸಾಲಕ್ಕೆ ಸಂಬಂಧಿಸಿದೆ ಎಂದು ಅನಿಲ್ ಅಂಬಾನಿಯವರ ವಕ್ತಾರರು ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಸಲ್ಲಿಸಿರುವ ಅಪೀಲಿನ ಕುರಿತಂತೆ ಅಂಬಾನಿಯವರು ಸೂಕ್ತ ಉತ್ತರ ನೀಡಲಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್‍ನ ಪ್ರಮುಖ ಕಂಪೆನಿಯಾಗಿದ್ದ  ರಿಲಯನ್ಸ್ ಕಮ್ಯುನಿಕೇಶನ್ಸ್ 2019ರಲ್ಲಿ ದಿವಾಳಿತನ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News