ಮಲೇರಿಯಾ, ಡೆಂಗಿ ಬಗ್ಗೆ ಜಾಗೃತೆ ವಹಿಸಿ: ಶಾಸಕ ಡಾ.ಭರತ್ ಶೆಟ್ಟಿ
Update: 2020-06-13 16:16 IST
ಮಂಗಳೂರು, ಜೂ.13: ಹೊಸಬೆಟ್ಟು ಕೋಡ್ದಬ್ಬು ದೈವಸ್ಥಾನದಲ್ಲಿ ಶನಿವಾರ ಶಾಸಕ ಡಾ.ಭರತ್ ಶೆಟ್ಟಿ ವೈ. ಮಲೇರಿಯಾ, ಡೆಂಗಿ ರೋಗದ ಬಗ್ಗೆ ಜಾಗ್ರತೆ ವಹಿಸುವಂತೆ ಸೂಚಿಸಿ ಮಾಹಿತಿ ನೀಡಿದರು.
ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಮಾತ್ರವಲ್ಲ ಇತರರಿಗೂ ಮಾಹಿತಿ ನೀಡಬೇಕು ಎಂದರು.
ಕೊರೋನ ಸೋಂಕಿನ ನಡುವೆ ಮಲೇರಿಯಾ, ಡೆಂಗಿಯನ್ನು ನಿರ್ಲಕ್ಷಿಸಬಾರದು. ಮಂಗಳೂರು ಮಹಾನಗರ ಪಾಲಿಕೆ ಉಚಿತವಾಗಿ ಸೊಳ್ಳೆ ಪರದೆ ವಿತರಿಸುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭ ಫಲಾನುಭವಿಗಳಿಗೆ ಸೊಳ್ಳೆ ಪರದೆ ವಿತರಿಸಿದರು.
ಕೊಡ್ದಬ್ಬು ದೈವಸ್ಥಾನದ ಬುಟ್ಟಿಯೊಂದರಲ್ಲಿ ನೀರು ನಿಂತು ಮಲೇರಿಯಾ ಸೊಳ್ಳೆಗಳ ಮೊಟ್ಟೆಗಳನ್ನು ಸ್ವತಃ ಶಾಸಕರು ನಾಶ ಪಡಿಸಿದರು.
ಸ್ಥಳೀಯ ಕಾರ್ಪೊರೇಟರ್ ವರುಣ್ ಚೌಟ, ವಿಠಲ ಸಾಲಿಯಾನ್, ಆರೋಗ್ಯ ಇಲಾಖೆ, ಮನಪಾ ಅಧಿಕಾರಿಗಳು ಉಪಸ್ಥಿತರಿದ್ದರು.