×
Ad

ಕೆರೆಯಲ್ಲಿ ಮುಳುಗಿ ಕೃಷ್ಣಾಪುರದ ಯುವಕ ಮೃತ್ಯು

Update: 2020-06-13 17:15 IST

ಮಂಗಳೂರು, ಜೂ.13: ಕೆರೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಯುವಕ ಈಜು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಯು ಕಾಟಿಪಳ್ಳ ಕೃಷ್ಣಾಪುರದಲ್ಲಿ ಶನಿವಾರ ನಡೆದಿದೆ.

ಕೃಷ್ಣಾಪುರ ನಿವಾಸಿ ಸಂತೋಷ್ (21) ಮೃತ ಯುವಕ.

ಈತನು ಸ್ನೇಹಿತರ ಜೊತೆಗೂಡಿ ಕೃಷ್ಣಾಪುರ ಸಮೀಪದ ಕೆರೆಗೆ ಸ್ನಾತಕ್ಕೆಂದು ತೆರಳಿದ್ದು, ಈ ವೇಳೆ ಈಜು ಬಾರದೇ ನೀರುಪಾಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News