ಗಂಗೊಳ್ಳಿ: ನಿರ್ಮಾಣ ಹಂತದ ಬಾವಿಗೆ ಬಿದ್ದು ಯುವಕ ಮೃತ್ಯು
Update: 2020-06-13 19:50 IST
ಗಂಗೊಳ್ಳಿ, ಜೂ.13: ನಿರ್ಮಾಣ ಹಂತದ ಬಾವಿಗೆ ಕಾಲು ಜಾರಿ ಬಿದ್ದು ಯುವಕ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ನಾಡಾ ಗ್ರಾಮದಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಕುಂದಾಪುರ ತಾಲೂಕಿನ ಕರಕುಂಜೆ ಗ್ರಾಮದ ಶೆಟ್ರಕಟ್ಟೆ ನಿವಾಸಿ ವಾಸು ಪೂಜಾರಿ ಎಂಬವರ ಪುತ್ರ ಲಕ್ಷ್ಮಣ್ ಪೂಜಾರಿ (38) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು, ಕುಂದಾಪುರ ಅಗ್ನಿಶಾಮಕ ದಳ, ಗಂಗೊಳ್ಳಿ 24x7 ಆಂಬ್ಯುಲೆನ್ಸ್ ಸ್ವಯಂಸೇವಕ ತಂಡ ಆಗಮಿಸಿ, ಮೃತದೇಹ ವನ್ನು ಮೇಲಕ್ಕೆತ್ತಲಾಯಿತು.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.