ಕೆಸಿಎಫ್ ರಿಯಾದ್ ಝೊನ್ ಸಮಿತಿಯ ಆಂಬ್ಯುಲೆನ್ಸ್ ಗೆ ಚಾಲನೆ

Update: 2020-06-13 17:06 GMT

ಉಳ್ಳಾಲ : ಎಸ್ಸೆಸ್ಸೆಫ್ ಸುಮಾರು ವರ್ಷಗಳಿಂದ ಸಮಾಜಕ್ಕೆ ಪೂರಕವಾದ ಕೆಲಸಗಳನ್ನು ಮಾಡುತ್ತ ಬಂದಿದೆ ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು.

ಅವರು ಕೆಸಿರೋಡ್ ನಲ್ಲಿ ನಡೆದ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆಸಿಎಫ್ ರಿಯಾದ್ ಝೊನ್ ಸಮಿತಿ ಕೊಡ ಮಾಡಿದ ಆಂಬ್ಯುಲೆನ್ಸ್ ವಾಹನದ ಕೀ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕೆಸಿಎಫ್ ಅಂತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ.ಶೇಕ್ ಬಾವಾ ಹಾಜಿ, ಆಂಬ್ಯುಲೆನ್ಸ್ ಕೀಯನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಸಮಿತಿಗೆ ಹಸ್ತಾಂತರಿಸಿದರು. ಅಧ್ಯಕ್ಷ ಡಾ.ಶೇಕ್ ಬಾವಾ ಹಾಜಿ ಮಾತನಾಡಿದರು. ಎಸ್ಸೆಸ್ಸೆಫ್ ದ ಕ ಜಿಲ್ಲಾ ಅಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳ ಕಾರ್ಯಕ್ರಮ ಉದ್ಘಾಟಿಸಿದರು.

ಕೆ ಸಿ ಎಫ್ ರಿಯಾದ್ ಝೊನ್ ನಝೀರ್ ಉಸ್ತಾದ್ ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಇರ್ಫಾನ್ ಅಬ್ದುಲ್ಲಾ ನುರಾನಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ಕೆಸಿಎಫ್  ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಬಶೀರ್ ತಲಪಾಡಿ ಕೆಸಿಎಫ್  ರಿಯಾದ್ ಝೊನ್ ಸಮಿತಿಯ ಯೋಜನೆ ಬಗ್ಗೆ ವಿವರಿಸಿದರು.

ಈ  ಸಂದರ್ಭ ಎಸ್ಸೆಸ್ಸೆಫ್ ದ ಕ ಜಿಲ್ಲಾ ವೆಸ್ಟ್ ಝೊನ್ ಅಧ್ಯಕ್ಷ ಮುನೀರ್ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ದ ಕ ಜಿಲ್ಲೆ ಕೋಶಾಧಿಕಾರಿ ಮುಹಮ್ಮದ್ ಅಲೀ ತುರ್ಕಳಿಕೆ, ಕೆಸಿಎಫ್  ರಿಯಾದ್ ಝೊನ್ ಪಬ್ಲೀಕೇಶನ್ ಕಾರ್ಯದರ್ಶಿ ಹನೀಫ್ ಕಣ್ಣೂರು, ಕೆಸಿಎಫ್ ರಿಯಾದ್ ಝೊನ್ ಸದಸ್ಯರಾದ  ಅಶ್ರಫ್ ಮದನಿ, ಅಶ್ರಫ್  ಅಮಾನಿ ಉಸ್ತಾದ್,  ಎಸ್ಸೆಸ್ಸೆಫ್ ದ ಕ ಜಿಲ್ಲಾ  ಪ್ರ ಕಾರ್ಯದರ್ಶಿ ಶರೀಫ್  ನಂದಾವರ, ಎಸ್ಸೆಸ್ಸೆಫ್ ದ ಕ ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ, ಎಸ್ಸೆಸ್ಸೆಫ್ ದ ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿಶರೀಫ್ ಬೇರ್ಕಲ, ಎಸ್ಸೆಸ್ಸೆಫ್ ದ ಕ ಜಿಲ್ಲಾ ಸದಸ್ಯರಾದ ಸಯ್ಯಿದ್ ಖುಬೈಬ್ ತಂಙಳ್,  ಇಕ್ಬಾಲ್ ಮಾಚಾರ್, ಹಕೀಂ ಕಳಂಜಿಬೈಲು ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಪ್ರ ಕಾರ್ಯದರ್ಶಿ ಜಾಫರ್ ಯು ಎಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News