ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಮಿಕನಿಗೆ ಥಳಿತ: ವೀಡಿಯೊ ವೈರಲ್

Update: 2020-06-14 16:02 GMT

ರಾಯ್‌ಪುರ, ಜೂ.14: ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದ್ದ ಕಾರ್ಮಿಕನನ್ನು ಆರೋಗ್ಯ ಸಿಬ್ಬಂದಿ ಥಳಿಸಿದ ಘಟನೆ ರಾಜನಂದಾಗಾಂವ್‌ನ ಪೆಂಡ್ರಿ ಎಂಬಲ್ಲಿ ನಡೆದಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರ್ಮಿಕ ಮದ್ಯಸೇವನೆ ಮಾಡಿದ್ದ ಎಂಬ ಕಾರಣಕ್ಕೆ ಸಿಬ್ಬಂದಿ ಥಳಿಸಿದ್ದು, ಘಟನೆಯ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿ ಅಲ್ಲಿಂದ ವರ್ಗಾಯಿಸಲಾಗಿದೆ ಎಂದು ಮುಖ್ಯ ವೈದ್ಯಕೀಯ ಆರೋಗ್ಯಾಧಿಕಾರಿ ಡಾ. ಮಿಥಿಲೇಶ್ ಚೌಧರಿ ಹೇಳಿದ್ದಾರೆ.

ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದ ಆ ಕಾರ್ಮಿಕ ಎರಡು ಗಂಟೆ ನಾಪತ್ತೆಯಾಗಿದ್ದ. ಬಳಿಕ ಮರಳಿ ಬಂದಾಗ ಮದ್ಯದ ನಶೆಯಲ್ಲಿದ್ದ. ಆಗ ಸಿಬ್ಬಂದಿ ಆತನಿಗೆ ಥಳಿಸಿದ್ದಾರೆ. ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದವರು ಹೇಳಿದ್ದಾರೆ. ಆರೋಗ್ಯ ಸಿಬಂದಿ ಕಾರ್ಮಿಕನನ್ನು ನಿಂದಿಸಿ ಥಳಿಸುವ ವೀಡಿಯೊ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News