ಕಾರ್ಕಳ: ತಂಡದಿಂದ ಮನೆಮಂದಿಗೆ ಹಲ್ಲೆ
ಕಾರ್ಕಳ, ಜೂ.14: ಕೆಲಸದ ವಿಚಾರದ ತಕರಾರಿಗೆ ಸಂಬಂಧಿಸಿ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ದುರ್ಗ ಗ್ರಾಮದ ತೆಳ್ಳಾರು ರಸ್ತೆ ಎಂಬಲ್ಲಿ ಜೂ.13ರಂದು ರಾತ್ರಿ 10ಗಂಟೆ ಸುಮಾರಿಗೆ ನಡೆದಿದೆ.
ತೆಳ್ಳಾರು ರಸ್ತೆಯ ಜಗದೀಶ್ ಸುನಿಲ್ ಸಫಲಿಗ ಎಂಬವರ ತಮ್ಮನಿಗೂ ಹಾಗೂ ಆರೋಪಿತರಾದ ರಾಜೇಶ್ ಶೆಟ್ಟಿ, ಸುರೇಶ್, ದಿನೇಶ್ ಪೂಜಾರಿ, ಯೋಗೀಶ್ ಶೆಟ್ಟಿ ಹಾಗೂ ಇತರರಿಗೂ ಕೆಲಸದ ವಿಚಾರದಲ್ಲಿ ತಕರಾರು ಇದ್ದು ಇದೇ ದ್ವೇಷದಿಂದ ಸುಮಾರು 7-8 ಜನ ಆರೋಪಿ ತರು ಅಕ್ರಮ ಕೂಟ ಸೇರಿಕೊಂಡು ಕಾರು ಹಾಗೂ ರಿಕ್ಷಾದಲ್ಲಿ ಮಾರಕಾಸ್ತ್ರಗಳೊಂದಿಗೆ ಅಕ್ರಮ ಪ್ರವೇಶ ಮಾಡಿ, ಜಗದೀಶ್ ಸುನಿಲ್ ಸಫಲಿಗರಿಗೆ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ಈ ವೇಳೆ ತಪ್ಪಿಸಲು ಬಂದ ಜಗದೀಶ್ ತಂಗಿಯರಾದ ಸ್ವಾತಿ ಮತ್ತು ಸತ್ಯಾವತಿ ಮತ್ತು ತಾಯಿ ಶಾಂತ ಸಫಲಿಗರಿಗೂ ಆರೋಪಿಗಳು ದೂಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.