×
Ad

ವಿಶ್ವ ರಕ್ತದಾನಿಗಳ ದಿನ : ಇ-ಫ್ರೆಂಡ್ಸ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ರಕ್ತದಾನ ಶಿಬಿರ

Update: 2020-06-15 13:11 IST

ಪುತ್ತೂರು : ವಿಶ್ವ ರಕ್ತದಾನಿಗಳ  ದಿನದ ಪ್ರಯುಕ್ತ ಇ-ಫ್ರೆಂಡ್ಸ್ ಪುತ್ತೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ರೋಟರಿ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.

ಕೊರೋನ ಭೀತಿಯ ನಡುವೆಯೂ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 24 ಮಂದಿ ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು  ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ವಿಶ್ವ ರಕ್ತ ದಾನಿಗಳ ದಿನಾಚರಣೆಯ ಕಾರ್ಯಕ್ರಮವನ್ನು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಉದ್ಘಾಟಿಸಿದರು. ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಶ್ಯಾಮ್ ರಕ್ತ ಮತ್ತು ರಕ್ತದಾನಿಗಳ ಅವಶ್ಯಕತೆ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ರೋ. ಎಸ್.ಭುಜಂಗ ಆಚಾರ್ಯ,ಇ ಫ್ರೆಂಡ್ಸ್ ಅಧ್ಯಕರಾದ ಡಾ. ಸರ್ಫ್ರಾಝ್ ಇಸ್ಮಾಯಿಲ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕರಾದ ಇಫಾಝ್ ಬನ್ನೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News