ಮುಡಿಪು: ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ
ಮಂಗಳೂರು : ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಬಡ ಕುಟುಂಬಕ್ಕೆ ಮುಡಿಪುವಿನಲ್ಲಿ ನಿರ್ಮಿಸಲಾಗಿದ್ದ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮವು ಸೋಮವಾರ ನಡೆಯಿತು.
ಮುಡಿಪು ಸಮೀಪ ಮನೆಯಿಲ್ಲದ ಬಡಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದಾಗಿ ತಂಡವು ಈ ಮೊದಲು ತೀರ್ಮಾನಿಸಲಾಗಿತ್ತು. ತೀರ್ಮಾನದಂತೆ ಕೈಗೊಂಡ ಈ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಪೂರ್ಣಗೊಂಡಿತು.
ಆಸಿಫ್ ಸಖಾಪಿ ಅಲ್ ಅಝ್ಹರಿ, ಗೌಸಿಯಾ ಜುಮಾ ಮಸೀದಿ ಮುಡಿಪು ಉದ್ಘಾಟಿಸಿದರು. ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಬ್ದುಲ್ಲಾ ಬವಾನಿ ಗ್ರಾನೈಟ್ ಕಲ್ಲಾಪು, ಅಸ್ಗರ್ ಮುಡಿಪು ನ್ಯಾಯವಾದಿ, ಬಶೀರ್ ಮುಡಿಸು ಗ್ರಾಮ ಪಂಚಾಯತ್ ಸದಸ್ಯರು ಮುಡಿಪು, ಖಲಂದರ್ ಹಾಜಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಪದಾಧಿಕಾರಿಗಳು ಮತ್ತು ಕಾರ್ಯನಿರ್ವಾಹಕರು ಭಾಗವಹಿಸಿದ್ದರು.
ಮನೆಯ ಕೀಲಿ ಕೈಯನ್ನು ಬ್ಲಡ್ ಡೋನರ್ಸ್ ಮಂಗಳೂರು ಇದರ ಮಹಿಳಾ ವಿಭಾಗದ ಅಧ್ಯಕ್ಷೆ ಆಯಿಷಾ ಉಳ್ಳಾಲ, ಸೆಕ್ರೆಟರಿ ಮುಫಿದಾ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸದಸ್ಯರು ಉಪಸ್ಥಿತರಿದ್ದರು.