×
Ad

ಉಡುಪಿ: 57 ಮಂದಿಯ ಕೊರೋನ ಸ್ಯಾಂಪಲ್ ನೆಗೆಟಿವ್

Update: 2020-06-15 20:34 IST

ಉಡುಪಿ, ಜೂ.15: ಪ್ರಯೋಗಾಲಯದ ಪರೀಕ್ಷೆಯಲ್ಲಿ ಸೋಮವಾರ ಇಬ್ಬರ ಗಂಟಲುದ್ರವದ ಸ್ಯಾಂಪಲ್ ಪಾಸಿಟಿವ್ ಆಗಿ ಬಂದಿದ್ದರೆ, 57 ಮಂದಿಯ ವರದಿ ನೆಗೆಟಿವ್ ಆಗಿ ಬಂದಿವೆ ಎಂದು ಜಿಲ್ಲಾ ಆರೋಗಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಕೋವಿಡ್-19ರ ಗುಣಲಕ್ಷಣವಿರುವ ಎಂಟು ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವರಲ್ಲಿ ಕೋವಿಡ್ ಸಂಪರ್ಕಿತರು ಒಬ್ಬರಾದರೆ, ಇಬ್ಬರು ಉಸಿರಾಟದ ತೊಂದರೆ ಯಿಂದ, ಐವರು ಶೀತಜ್ವರದಿಂದ ಬಳಲುವರು ಎಂದು ಡಾ.ಸೂಡ ವಿವರಿಸಿದರು.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳ ಸಂಖ್ಯೆ 12,915ಕ್ಕೇರಿದೆ. ಇವುಗಳಲ್ಲಿ ಈವರೆಗೆ 11,835 ನೆಗೆಟಿವ್ ಆಗಿ ಬಂದರೆ, 1028 ಸ್ಯಾಂಪಲ್ ಪಾಸಿಟಿವ್ ಆಗಿವೆ. ಇನ್ನು 52 ಸ್ಯಾಂಪಲ್‌ಗಳ ವರದಿ ಮಾತ್ರ ಬರಬೇಕಿದೆ.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳ ಸಂಖ್ಯೆ 12,915ಕ್ಕೇರಿದೆ. ಇವುಗಳಲ್ಲಿ ಈವರೆಗೆ 11,835 ನೆಗೆಟಿವ್ ಆಗಿ ಬಂದರೆ, 1028 ಸ್ಯಾಂಪಲ್ ಪಾಸಿಟಿವ್ ಆಗಿವೆ. ಇನ್ನು 52 ಸ್ಯಾಂಪಲ್‌ಗಳ ವರದಿ ಮಾತ್ರ ಬರಬೇಕಿದೆ. ಇಂದು ಆರು ಮಂದಿ ಪುರುಷರು ಹಾಗೂ ಇಬ್ಬರು ನಾಲ್ವರು ಮಹಿಳೆ ಯರು ಸೇರಿ ಎಂಟು ಮಂದಿ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇವರಲ್ಲಿ ಕೊರೋನ ಶಂಕಿತರು ಒಬ್ಬರು, ಉಸಿರಾಟದ ತೊಂದರೆಯವರು 6 ಮಂದಿ ಹಾಗೂ ಶೀತಜ್ವರದಿಂದ ಬಾಧಿತರಾದ ಒಬ್ಬರು ಸೇರಿದ್ದಾರೆ.

ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 6 ಮಂದಿ ಬಿಡುಗಡೆಗೊಂಡಿದ್ದು, 81 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 23 ಮಂದಿ ಸೇರಿದಂತೆ ಒಟ್ಟು 5421 ಮಂದಿಯನ್ನು ಕೊರೋನ ತಪಾಸಣೆಗೆ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 486 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News