ಚೀನಾ: ಹೊಸದಾಗಿ 49 ಕೊರೋನ ವೈರಸ್ ಪ್ರಕರಣಗಳು ವರದಿ

Update: 2020-06-15 16:17 GMT

ಬೀಜಿಂಗ್, ಜೂ. 15: ಚೀನಾದಲ್ಲಿ ಹೊಸದಾಗಿ 49 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಈ ಪೈಕಿ 36 ಪ್ರಕರಣಗಳು ರಾಜಧಾನಿ ಬೀಜಿಂಗ್ ಒಂದರಲ್ಲೇ ಕಾಣಿಸಿಕೊಂಡಿವೆ.

ಬೀಜಿಂಗ್‌ನ ಸಗಟು ಆಹಾರ ಮಾರುಕಟ್ಟೆಯು ಹೊಸ ಕೊರೋನ ವೈರಸ್ ಪ್ರಕರಣಗಳ ಕೇಂದ್ರಬಿಂದುವಾಗಿದೆ. ಇದು ದೇಶದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಎರಡನೇ ಅಲೆಗೆ ಕಾರಣವಾಗಬಹುದು ಎಂಬ ಭೀತಿ ಈಗ ಹುಟ್ಟಿಕೊಂಡಿದೆ.

ಜಗತ್ತಿನ ಮೊದಲ ಕೊರೋನ ವೈರಸ್ ಸೋಂಕು ಪ್ರಕರಣಗಳು ಚೀನಾದ ವುಹಾನ್ ನಗರದಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ ಕಾಣಿಸಿಕೊಂಡಿದ್ದವು. ಬಳಿಕ ಸಾಂಕ್ರಾಮಿಕವು ದೇಶದಲ್ಲಿ ಉಲ್ಬಣಗೊಂಡಿತ್ತಾದರೂ, ಕೆಲವೇ ತಿಂಗಳುಗಳಲ್ಲಿ ಅದನ್ನು ಹತೋಟಿಗೆ ತರುವಲ್ಲಿ ಚೀನಾ ಯಶಸ್ವಿಯಾಗಿತ್ತು. ಆದರೆ, ಕಳೆದ ವಾರ ರಾಜಧಾನಿಯಲ್ಲಿ ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು ಸೋಂಕಿನ ಎರಡನೇ ಅಲೆಯ ಭೀತಿ ವ್ಯಕ್ತವಾಗಿದೆ.

ಬೀಜಿಂಗ್‌ನ ಪ್ರಕರಣಗಳ ಹೊರತಾಗಿ, ಹೆಬೆಯ್ ಪ್ರಾಂತದಲ್ಲಿ ಮೂರು ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News