ಬ್ಯಾರಿ ಕವನ ಸ್ಪರ್ಧೆ: ಫಲಿತಾಂಶ ಪ್ರಕಟ
ಮಂಗಳೂರು, ಜೂ.15: ಕೊರೋನ-ಲಾಕ್‌ಡೌನ್ ಸಂದಂರ್ಭ ನಡೆದ ಆಗುಹೋಗುಗಳ ಬಗ್ಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಆಯೋಜಿಸಿದ್ದ ಬ್ಯಾರಿ ಸ್ವರಚಿತ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಅನ್ಸಾರ್ ಕಾಟಿಪಳ್ಳ (ಪ್ರಥಮ-5,000 ರೂ.), ಹಫ್ಸಾ ಬಾನು ಬೆಂಗಳೂರು (ದ್ವೀತಿಯ -3,000 ರೂ,,), ಸಪ್ವಾನ್ ಕೂರತ್ (ತೃತೀಯ- 2,000 ರೂ.) ಆಯ್ಕೆಯಾಗಿದ್ದಾರೆ.
ಸಮಾಧಾನಕರ ಬಹುಮಾನಕ್ಕೆ ಆಯಿಶಾ ಯುಕೆ ಉಳ್ಳಾಲ,ಝಲೇಖಾ ಮುಮ್ತಾಝ್, ಅಬ್ದುಲ್ ರಫಾಕ್ ಕೆಮ್ಮಾರ, ನಸೀಬಾ ಗಡಿಯಾರ, ಸಂಶೀರ್ ಸವಣೂರು, ಶಾಕಿರ್ ಹಕ್ ನೆಲ್ಯಾಡಿ, ಅಫೀಝ್ ಒಮಾನ್, ಸಲೀಂ ಬೋಳಂಗಡಿ, ಶಾಹುಲ್ ಹಮೀದ್ ಕಾಶಿಪಟ್ನ, ಹಸೀನಾ ಮಲ್ನಾಡ್, ಮನವ್ವರ್ ಜೋಗಿಬೆಟ್ಟು,ಅಕ್ಬರ್‌ಆಲಿ ಬಜ್ಪೆ, ಸಲ್ಮಾ ಮಂಗಳೂರು, ಮಿಸ್ರಿಯಾ ಐ.ಪಜೀರ್, ಫಾತಿಮತ್ ರಮೀಝ್ ಪಿ., ಮುಹಮ್ಮದ್ ಸಮೀರ್, ರೈಹಾನ, ಸಿದ್ದೀಕ್ ಪೂಂಜಾಲಕಟ್ಟೆ, ಮುಸ್ತಫಾ ಇರಾಬೈಲ್, ಸಫಾ ಕಾರ್ಕಳ, ಹನೀಫ್ ಪುತ್ತೂರು , ಶಮೀಮ್ ಕುಟ್ಟಿಕಳ, ಅಬ್ದುಲ್ ಅನ್ಸಾರ್ ಇನೋಳಿ, ಬಿಎಂ ಇಚ್ಲಂಗೋಡ್, ಯುಕೆ ಖಾಲಿದ್ (ತಲಾ 250 ರೂ.)ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.