ಬೆಂಕಿ ತಗುಲಿ ಸುಟ್ಟು ಕರಕಲಾದ ದ್ವಿಚಕ್ರ ವಾಹನ
Update: 2020-06-15 22:37 IST
ಮಂಗಳೂರು, ಜೂ.15: ದ್ವಿಚಕ್ರ ವಾಹನವೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ನಗರದ ಹೊರವಲಯದ ಎಡಪದವು ಕುಕ್ಕುದನೆ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಸೂರಲ್ಪಾಡಿಯ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಎಡಪದವಿನಿಂದ ಗಂಜಿಮಠದತ್ತ ಹೋಗುತ್ತಿದ್ದಾಗ ದಾರಿ ಮಧ್ಯೆ ವಾಹನದಲ್ಲಿ ಹೊಗೆ ಕಾಣಿಸಿ ಕೊಂಡಿತು. ತಕ್ಷಣ ವಾಹನ ನಿಲ್ಲಿಸಿ ನೋಡುತ್ತಿದ್ದಂತೆ, ಪೆಟ್ರೋಲ್ ಟ್ಯಾಂಕ್ ಮತ್ತು ಟೈರ್ ಸಿಡಿದು ಬೆಂಕಿ ವ್ಯಾಪಿಸಿತು. ಸವಾರನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ಘಟನೆ ಬಗ್ಗೆ ದೂರು ದಾಖಲಾಗಿಲ್ಲ.