ಮೊಂಟೆಪದವು: ಕೋವಿಡ್ 19 ಕುರಿತು ಜಾಗೃತಿ, ಸಂವಾದ ಕಾರ್ಯಕ್ರಮ

Update: 2020-06-15 18:07 GMT

ದೇರಳಕಟ್ಟೆ : ಕೋವಿಡ್ 19 ಕುರಿತಂತೆ ಜಾಗೃತಿ ಮತ್ತು ಯೆನಪೋಯಾ ಆಸ್ಪತ್ರೆ ಆರಂಭಿಸಿರುವ ಮನೆ ಬಾಗಿಲಿಗೆ ಆಸ್ಪತ್ರೆ ಸೇವೆಗಳ ಕುರಿತಂತೆ ಮಾಹಿತಿ ಮತ್ತು ಗ್ರಾಮಸ್ಥರೊಂದಿಗೆ ಸಂವಾದ ಕಾರ್ಯಕ್ರಮ ಡಿವೈಎಫ್‍ಐ ಹಾಗೂ ಯೆನಪೋಯಾ ಆಸ್ಪತ್ರೆಯ ಸಹಯೋಗದೊಂದಿಗೆ ಮೊಂಟೆಪದವಿನಲ್ಲಿ ನಡೆಯಿತು.

ಸಭೆಯನ್ನು ಡಿವೈಎಫ್‍ಐ ಉಳ್ಳಾಲ ವಲಯ ಅಧ್ಯಕ್ಷರಾದ ಅಶ್ರಫ್ ಕೆಸಿ ರೋಡ್ ಉದ್ಘಾಟಿಸಿದರು. ಯೆನಪೋಯಾ ಆಸ್ಪತ್ರೆಯ ಅಸಿಸ್ಟೆಂಟ್ ಮೆಡಿಕಲ್ ಸೂಪರಿಟೆಂಡೆಂಟ್ ಡಾ ನಾಗರಾಜ್ ಶೇಟ್ ಮಾತನಾಡಿ ಆಸ್ಪತ್ರೆಯಿಂದ 30 ಕಿಮೀ ವ್ಯಾಪ್ತಿಯಲ್ಲಿರುವ ನಾಗರೀಕರಿಗೆ ಆಸ್ಪತ್ರೆಯ ವತಿಯಿಂದ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಮನೆ ಬಾಗಿಲಿಗೆ ಔಷಧ, ವೈದ್ಯರ ಸೇವೆ ಮತ್ತು ಹಿರಿಯ ನಾಗರೀಕರಿಗೆ ನಿಯಮಿತ ಪರೀಕ್ಷೆಗಳನ್ನು ನಡೆಸಲಾಗುವುದು, ನಾಗರೀಕರು ಇದರ ಸದುಪಯೋಗ ಪಡೆಯಬೇಕು ಎಂದರು.

ಸಭೆಯಲ್ಲಿ ಯೆನಪೋಯಾ ಸಂಸ್ಥೆಯ ಅಧಿಕಾರಿ ವಿಜಯೇಂದ್ರ ಶೆಟ್ಟಿ, ಶಿವಪ್ರಸಾದ್ , ಶಾಫಿ, ಡಿವೈಎಫ್‍ಐ ಉಳ್ಳಾಲ ವಲಯ ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಮೊಂಟೆಪದವು ಘಟಕದ ಅಧ್ಯಕ್ಷ ಸಿರಾಜ್ ಬಿ.ಎಂ, ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ಖಾದರ್ , ಗ್ರಾಪಂ ಸದಸ್ಯರಾದ  ಅಬ್ದುಲ್ ರಹಿಮಾನ್, ಫಯಾಝ್ ಮೊಂಟೆಪದವು,  ಆಬೂಬಕರ್ ಆಳ್ವರಬೆಟ್ಟು, ಅಝೀಝ್ ಮೊಂಟೆಪದವು, ಮಂಜನಾಡಿ  ಗ್ರಾಪಂ ಮಾಜಿ ಸದಸ್ಯ ಎಂ.ಎಂ ಕುಂಞಿ , ನಿವೃತ್ತ ಬ್ಯಾಂಕ್ ಅಧಿಕಾರಿ ಪಿ.ಹೆಚ್ ಅಬ್ಬು, ಸಂಶುದ್ದೀನ್ ಯು.ಟಿ, ಹರಿಫ್ ಮೊಂಟೆಪದವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News