ಗಾಯಗೊಂಡಿದ್ದ ಬಿಳಿಯ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ನಡೆದ ಕರಿಯ ವ್ಯಕ್ತಿ: ಫೋಟೊ ವೈರಲ್

Update: 2020-06-15 18:02 GMT

ಹೊಸದಿಲ್ಲಿ: ವರ್ಣಬೇಧ ನೀತಿಯ ವಿರೋಧಿ ಹೋರಾಟಗಾರರು ಮತ್ತು ಬಲಪಂಥೀಯರ ನಡುವೆ ನಡೆಯುತ್ತಿದ್ದ ಪರಸ್ಪರ ಪ್ರತಿಭಟನೆ ವೇಳೆ ಗಾಯಗೊಂಡ ಬಿಳಿಯ ವ್ಯಕ್ತಿಯೊಬ್ಬರನ್ನು ಕರಿಯ ವ್ಯಕ್ತಿಯೊಬ್ಬರು ಹೆಗಲ ಮೇಲೆ ಹೊತ್ತು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಂಡನ್ ನಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.

ಬಿಳಿಯ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತವರನ್ನು ಪ್ಯಾಟ್ರಿಕ್ ಹಚಿನ್ಸನ್ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ವ್ಯಕ್ತಿ ಬಲಪಂಥೀಯ ಎಂದು ಹೇಳಲಾಗುತ್ತಿದ್ದರೂ ಅದು ಇನ್ನೂ ಖಚಿತಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News