×
Ad

ಕೋವಿಡ್-19 ನಿಯಮ ಉಲ್ಲಂಘನೆ: ನಗರಸಭೆಯಿಂದ 27,500ರೂ ದಂಡ ವಸೂಲಿ

Update: 2020-06-16 21:31 IST

ಉಡುಪಿ, ಜೂ.16: ಜಿಲ್ಲೆಯಲ್ಲಿ ಕೋವಿಡ್-19ಹರಡುವುದನ್ನು ತಡೆಗಟ್ಟುವ ಕುರಿತಂತೆ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸುರಕ್ಷತಾ ಅಂತರ ಪಾಲಿಸದಿರುವ 9 ಮಂದಿಯಿಂದ 900 ರೂ ಮತ್ತು ಮಾಸ್ಕ್ ಧರಿಸದ 266 ಮಂದಿಯಿಂದ 26,600 ರೂ.ಗಳ ದಂಡ ಸೇರಿದಂತೆ ಒಟ್ಟು 27,500ರೂ.ಗಳನ್ನು ವಸೂಲಿ ಮಾಡಲಾಗಿದೆ. ಈ ಕಾರ್ಯಾಚರಣೆ ಮೇ 12ರಿಂದ ಜೂ.16ರವರೆಗೆ ನಡೆದಿದೆ ಎಂದು ಉಡುಪಿ ನಗರಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News