ಕೆರೆಗೆ ಹಾರಿ ಆತ್ಮಹತ್ಯೆ
Update: 2020-06-16 22:14 IST
ಅಮಾಸೆಬೈಲು, ಜೂ.16: ಮಕ್ಕಳಾಗದ ಚಿಂತೆಯಲ್ಲಿ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮಾಸೆಬೈಲು ಗ್ರಾಮದ ಕೆಳಸುಂಕ ಎಂಬಲ್ಲಿ ನಡೆದಿದೆ. ಮೃತರನ್ನು ಸಾಕು ಯಾನೆ ಶಕುಂತಲಾ (48) ಎಂದು ಗುರುತಿಸಲಾಗಿದೆ.
ಎಂದಿನಂತೆ ಜೂ.15ರ ರಾತ್ರಿಯೂ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಶಕುಂತಲಾ, ಬೆಳಗ್ಗೆ ಎದ್ದು ನೋಡುವಾಗ ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕದ ಪರಿಸರದಲ್ಲಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಬಳಿಕ ಹುಡುಕಿದಾಗ ಅಕ್ಕನ ಮಗಳ ಮನೆಯ ಜಾಗದಲ್ಲಿರುವ ಕೆರೆಯಲ್ಲಿ ಅವರ ಮೃತ ದೇಹ ಪತ್ತೆಯಾಯಿತು.
ಶಕುಂತಲಾ ಅವರಿಗೆ ಮಕ್ಕಳಾಗದೇ ಇದ್ದು, ಮಾರಕ ರೋಗದಿಂದ ಬಳಲು ತ್ತಿರುವ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.