ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫೋರಂ ಜಿಲ್ಲಾ ಅಧ್ಯಕ್ಷರಾಗಿ ಆಸಿಫ್ ಚೊಕ್ಕಬೆಟ್ಟು ಆಯ್ಕೆ
Update: 2020-06-16 22:21 IST
ಮಂಗಳೂರು, ಜೂ.16: ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫೋರಂನ ದ.ಕ. ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಸಿಫ್ ಚೊಕ್ಕಬೆಟ್ಟು ಆಯ್ಕೆಯಾಗಿದ್ದಾರೆ.
ಮುಸ್ಲಿಂ ಡೆವಲಪ್‌ಮೆಂಟ್ ಫೋರಂನ ರಾಜ್ಯಾಧ್ಯಕ್ಷ ನಸೀರ್ ಅಹ್ಮದ್ ಶಿಫಾರಸಿನ ಮೇರೆಗೆ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಶಕೀಲ್ ಹಸನ್ ಎಚ್. ಅವರು ದ.ಕ. ಜಿಲ್ಲಾ ಅಧ್ಯಕ್ಷರನ್ನಾಗಿ ಆಸಿಫ್ ಚೊಕ್ಕಬೆಟ್ಟು ಅವರನ್ನು ಆಯ್ಕೆ ಮಾಡಿದ್ದಾರೆ.
ಮುಸ್ಲಿಂ ಡೆವಲಪ್‌ಮೆಂಟ್ ಫೋರಂ ಸಂಘಟನೆಯು ಸ್ಥಾಪನೆಯಾದ ಒಂದು ವರ್ಷದಲ್ಲೇ ದೇಶಾದ್ಯಂತ ಸುಮಾರು 9.50 ಲಕ್ಷಕ್ಕಿಂತಲೂ ಹೆಚ್ಚಿನ ಕಾರ್ಯಕರ್ತರನ್ನು ಹೊಂದಿದ್ದು, ಬಹುತೇಕ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕಟ್ಟುನಿಟ್ಟಿನ ಲಾಕ್‌ಡೌನ್ ಸಂದರ್ಭ ಸಂಘಟನೆಯು ದೇಶಾದ್ಯಂತ ಆಹಾರ ಸಾಮಗ್ರಿಗಳನ್ನು ಲಕ್ಷಾಂತರ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.