×
Ad

ಟೆಂಟ್ ಕೀಳಲು ಚೀನಾದ ನಿರಾಕರಣೆ ಘರ್ಷಣೆಗೆ ಕಾರಣವಾಗಿತ್ತು

Update: 2020-06-16 23:41 IST

ಹೊಸದಿಲ್ಲಿ,ಜೂ.16: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಉಭಯ ದೇಶಗಳ ಸೈನಿಕರ ನಡುವಿನ ಮಾರಣಾಂತಿಕ ಹೊಡೆದಾಟಗಳಿಗೆ ಚೀನಾ ಅಲ್ಲಿ ಸ್ಥಾಪಿಸಿದ್ದ ಟೆಂಟ್ ಕಾರಣವಾಗಿತ್ತು.

  ವಾಸ್ತವಿಕ ನಿಯಂತ್ರಣ ರೇಖೆಯ ಭಾರತದ ಭಾಗದೊಳಗಿರುವ ಗಡಿ ಪಹರೆ ಪಾಯಿಂಟ್ 14 ಎಂಬ ಕೋಡ್ ಸಂಕೇತ ಹೊಂದಿರುವ ಸ್ಥಳದ ಬಳಿ ಚೀನಾದ ಸೇನೆಯು ತನ್ನ ಟೆಂಟ್ ಸ್ಥಾಪಿಸಿದ್ದು,ಇದನ್ನು ಕಿತ್ತೆಸೆಯಲು ಭಾರತೀಯ ಯೋಧರು ಮುಂದಾದಾಗ ಎತ್ತರದ ಸ್ಥಳದಲ್ಲಿದ್ದ ಚೀನಿ ಸೈನಿಕರು ಅವರತ್ತ ಕಲ್ಲು ತೂರಾಟ ಆರಂಭಿಸಿದ್ದರು. ಬಳಿಕ ಕಬ್ಬಿಣದ ರಾಡ್‌ಗಳು ಮತ್ತು ದೊಣ್ಣೆಗಳಿಂದ ದಾಳಿ ನಡೆಸಿದ್ದರು ಎಂದು ಸರಕಾರದಲ್ಲಿಯ ಉನ್ನತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News