ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಿಂದ ವೃತ್ತಿಜೀವನದ ಆರಂಭದ ಕುರಿತು ವೆಬಿನಾರ್
ಮಂಗಳೂರು : ಶಿಕ್ಷಣದ ನಂತರದ ಅನುಭವವನ್ನು ಅರಿಯಲು ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) ಇಂಡಸ್ಟ್ರಿ ಅಂಡ್ ಇನ್ನೋವೇಶನ್ ಗ್ರೂಪ್ ವೃತ್ತಿಜೀವನದ ಆರಂಭದ ಕುರಿತು ವೆಬಿನಾರನ್ನು ಜೂ.19ರಂದು ಆಯೋಜಿಸಿದೆ.
ಸಂಜೆ 4:30ರಿಂದ 5:30 ಈ ವೆಬಿನಾರಿನ ಸಂಪನ್ಮೂಲ ವ್ಯಕಿತಿಯಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಪ್ರಸಕ್ತ ಕೆಲ್ಲಾಗ್ಸ್ (ಜರ್ಮನಿ ಮತ್ತು ಆಸ್ಟ್ರಿಯಾ) ನಲ್ಲಿ ವಾಣಿಜ್ಯ ತಂಡದ ಪ್ರಮುಖರು ಆದ ಅನೂಪ್ ಡಿಸೋಜಾ ಭಾಗವಹಿಸಲಿದ್ದಾರೆ.
ಅನೂಪ್ ಡಿಸೋಜಾ ಎಸ್‌ಜೆಇಸಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್‌ನ ಹಳೆಯ ವಿದ್ಯಾರ್ಥಿಯಾಗಿರುವ ಜೊತೆಗೆ ಅನುಭವಿ ಹಣಕಾಸು ವ್ಯವಸ್ಥಾಪಕ. ವಿಶ್ಲೇಷಣೆಗಳು, ವ್ಯವಹಾರ ನಿರ್ವಹಣೆ, ಜನರ ನಿರ್ವಹಣೆ ಮತ್ತು ವಿಮರ್ಶಾತ್ಮಕ ಚಿಂತನೆಗಳಲ್ಲಿ ಪ್ರಮುಖ ಸಾಮರ್ಥ್ಯಗಳನ್ನು ಹೊಂದಿದ್ದು ಸ್ಟಾರ್ಟ್ ಅಪ್ ಮತ್ತು ದೊಡ್ಡ ಸಂಸ್ಥೆಗಳೆರಡನ್ನೂ ನಿರ್ವಹಿಸುವಲ್ಲಿ ಪರಿಣತರಾಗಿದ್ದಾರೆ. ಅಮೆಜಾನ್, ಪ್ರಾಕ್ಟರ್ ಮತ್ತು ಗ್ಯಾಂಬಲ್, ಟೆಸ್ಕೊ, ಮತ್ತು ಹುವಾವೇ ಮುಂತಾದ ಕಂಪನಿಗಳ ಅನುಭವವಿರುವ ಅನೂಪ್ ಅವರು ತಾಂತ್ರಿಕ, ಆರ್ಥಿಕ ಮತ್ತು ನಾಯಕತ್ವದ ಪಾತ್ರಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದಾರೆ.
ಆಸಕ್ತರು ಈ ವೆಬಿನಾರ್‌ಗೆ https://bit.ly/kickstarting-career-sjec ಭೇಟಿ ನೀಡಿ ನೋಂದಾಯಿಸಿಕೊಳ್ಳುವ ಮೂಲಕ ಹಾಜರಾಗಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.