ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ
ಉಡುಪಿ, ಜೂ.17: ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತಿದ್ದು, ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 11.37 ಸೆ.ಮಿ. ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಮ್ ಮಾಹಿತಿ ನೀಡಿದೆ.
ಈ ಅವಧಿಯಲ್ಲಿ ಉಡುಪಿಯಲ್ಲಿ 12.1 ಸೆ.ಮೀ., ಕುಂದಾಪುರದಲ್ಲಿ 12 ಸೆ.ಮಿ. ಹಾಗೂ ಕಾರ್ಕಳದಲ್ಲಿ 10 ಸೆ.ಮೀ. ಮಳೆಯಾದ ಬಗ್ಗೆ ವರದಿ ಇದೆ. ಮುಂದಿನ ಮೂರು ದಿನಗಳ ಕಾಲವೂ ಉಡುಪಿ ಜಿಲ್ಲೆಯ ಅಲ್ಲಲ್ಲಿ ಸಾದಾರಣ ದಿಂದ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ವಿಶ್ವನಾಥ ಪೂಜಾರಿ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದೆ. ಇದರಿಂದ ಸುಮಾರು 20 ಸಾವಿರ ರೂ.ನಷ್ಟವಾಗಿದೆ. ಇದೇ ರೀತಿ ಕಾಪು ತಾಲೂಕಿನ ಪಡು ಗ್ರಾಮದ ಭಾಸ್ಕರ್, ಲಲಿತ ಹಾಗೂ ಬೇಬಿ ಮಡಿವಾಳ್ತಿ ಎಂಬವರ ಮನೆಯ ಮಾಡಿನ ಹೆಂಚು ನಿನ್ನೆ ಬೀಸಿದ ಭಾರೀ ಗಾಳಿಗೆ ಹಾರಿಹೋಗಿದ್ದು ಒಟ್ಟು 25ಸಾವಿರಕ್ಕೂ ಅಧಿಕ ನಷ್ಟವಾದ ಬಗ್ಗೆ ಅಂದಾಜಿಸಲಾಗಿದೆ.