ಸರಕಾರದಿಂದ ಹೇಳಿಕೆ ಅಪೇಕ್ಷಿಸುವುದು ರಾಷ್ಟ್ರವಿರೋಧಿ ಕ್ರಮವಾದೀತೇ : ತೃಣಮೂಲ ಕಾಂಗ್ರೆಸ್ ಪ್ರಶ್ನೆ

Update: 2020-06-17 13:48 GMT

ಕೋಲ್ಕತಾ, ಜೂ.17: ಲಡಾಖ್ ಗಡಿಭಾಗದಲ್ಲಿ ನಡೆದಿರುವ ಘಟನೆಗಳ ಬಗ್ಗೆ ಸರಕಾರದಿಂದ ಹೇಳಿಕೆ ಅಪೇಕ್ಷಿಸುವುದು ರಾಷ್ಟ್ರವಿರೋಧಿ ಕ್ರಮವಾದೀತೇ ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವ ಮೊಯಿತ್ರಾ ಪ್ರಶ್ನಿಸಿದ್ದಾರೆ.

ಯಾವುದೇ ವಾಸ್ತವಿಕ ಪುರಾವೆಗಳಿಲ್ಲದ ಸರ್ಜಿಕಲ್ ದಾಳಿ ಬಗ್ಗೆ ಟಾಂಟಾಂ ಮಾಡಿ ಬಿಜೆಪಿ ಯಾವ ರೀತಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿರುವುದು ಆಶ್ಚರ್ಯಕರವಾಗಿದೆ. ಈಗ ನಮ್ಮ ಹುತಾತ್ಮ ಯೋಧರ 20 ನೈಜ ಮುಖಗಳು ನಮ್ಮೆದುರಿಗಿವೆ. ಆದರೆ ಪ್ರಧಾನಿ ಮೌನವಾಗಿದ್ದಾರೆ ಎಂದು ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.

ಚೀನಾಕ್ಕೆ ದಿಟ್ಟ ಪ್ರತ್ಯುತ್ತರ ನೀಡುವುದು ಯಾವಾಗ ? ಒಂದು ಗುಂಡೂ ಹಾರದೆ 20 ಯೋಧರು ಮೃತಪಟ್ಟಿದ್ದಾರೆ. ನಾವೇನು ಮಾಡಿದ್ದೇವೆ ? ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ. ಜೆಡಿಎಸ್ ಸಹಿತ ಹಲವು ಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News