ನಮ್ಮ ಎಷ್ಟು ಭೂಭಾಗವನ್ನು ಚೀನಾ ವಶಪಡಿಸಿಕೊಂಡಿದೆ: ಪ್ರಧಾನಿಗೆ ಸೋನಿಯಾ ಗಾಂಧಿಯಿಂದ ಹಲವು ಪ್ರಶ್ನೆಗಳು

Update: 2020-06-17 15:41 GMT

ಹೊಸದಿಲ್ಲಿ, ಜೂ.17: ಚೀನಾವು ಭಾರತದ ಭೂಭಾಗವನ್ನು ಹಠಾತ್ ಸ್ವಾಧೀನ ಪಡಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಮತ್ತು 20 ಯೋಧರು ಯಾಕೆ ಹುತಾತ್ಮರಾದರು ಎಂಬ ಬಗ್ಗೆ ಪ್ರಧಾನಿ ಮೋದಿ ದೇಶಕ್ಕೆ ವಿವರಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.

3 ನಿಮಿಷಗಳ ವೀಡಿಯೊದಲ್ಲಿ ಸೋನಿಯಾ, ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದು ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ. “ನಮ್ಮ ಇನ್ನೂ ಕೆಲವು ಯೋಧರು ಮತ್ತು ಕಮಾಂಡರ್‌ಗಳು ನಾಪತ್ತೆಯಾಗಿದ್ದಾರೆಯೇ ?, ನಮ್ಮ ಎಷ್ಟು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ?, ಯಾವ ಪ್ರದೇಶದಲ್ಲಿ ಮತ್ತು ಎಷ್ಟು ವಿಸ್ತಾರದ ಪ್ರದೇಶವನ್ನು ಚೀನಾ ಸ್ವಾಧೀನಪಡಿಸಿಕೊಂಡಿದೆ ?, ಈ ಪರಿಸ್ಥಿತಿಯನ್ನು ನಿರ್ವಹಿಸಲು ಸರಕಾರ ಯಾವ ಕಾರ್ಯನೀತಿ ರೂಪಿಸಿದೆ ? ಆ ಪ್ರದೇಶದಲ್ಲಿ ಈಗ ಪರಿಸ್ಥಿತಿ ಹೇಗಿದೆ” ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.

ನಮ್ಮ 20 ಯೋಧರ ಬಲಿದಾನ ಅತ್ಯಂತ ದುಃಖದ ವಿಷಯವಾಗಿದೆ. ಆ ಧೈರ್ಯಶಾಲಿ ಯೋಧರಿಗೆ ಹೃದಯಪೂರ್ವಕವಾಗಿ ಗೌರವ ಸಮರ್ಪಿಸುತ್ತೇನೆ ಎಂದು ಸೋನಿಯಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News