×
Ad

ಸೆಕ್ಯುರಿಟಿ ಗಾರ್ಡ್ ನಾಪತ್ತೆ

Update: 2020-06-17 21:25 IST

ಮಂಗಳೂರು, ಜೂ.17: ನಗರದ ಜ್ಯೋತಿ ಜಂಕ್ಷನ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಉರ್ವದ ಪಿಂಟೊ ಕಂಪೌಂಡ್‌ನ ನಿವಾಸಿ ನಿರಂಜನ್ ಕುಮಾರ್ (30) ಜೂ.15ರಿಂದ ಕಾಣೆಯಾಗಿದ್ದು, ಈ ಬಗ್ಗೆ ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆ- ತಾಯಿ ಇಬ್ಬರೂ ಇಲ್ಲದ ನಿರಂಜನ್ ಕುಮಾರ್ ಎಸೆಸೆಲ್ಸಿ ತನಕ ಓದಿದ್ದಾರೆ. ಕಳೆದ ಎರಡೂವರೆ ತಿಂಗಳಿಂದ ತನ್ನ ಸ್ನೇಹಿತನ ಮನೆ ಯಲ್ಲಿದ್ದು, ಅಲ್ಲಿಂದಲೇ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಹೋಗುತ್ತಿದ್ದರು. ಜೂ.15ರಂದು ಬೆಳಗ್ಗೆ 10 ಗಂಟೆಗೆ ಸೆಕ್ಯುರಿಟಿ ಗಾರ್ಡ್ ಕೆಲಸ ಮುಗಿಸಿ ಅಲ್ಲಿಂದ ಹೊರಟವರು ಸ್ನೇಹಿತನ ಮನೆಗೆ ಹೋಗದೆ ನಾಪತ್ತೆಯಾಗಿದ್ದಾರೆ.

 ಚಹರೆ: ನಿರಂಜನ್ ಕುಮಾರ್ ಸಾಧಾರಣ ಮೈಕಟ್ಟು, 5 ಅಡಿ 6 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು, ಎದೆಯ ಎಡ ಭಾಗದಲ್ಲಿ ಮಚ್ಚೆ ಹೊಂದಿದ್ದು, ಕಪ್ಪು ಪ್ಯಾಂಟ್, ಬಿಳಿ ಕಪ್ಪು ಲೈನ್ ಇರುವ ಅರ್ಧ ತೋಳಿನ ಅಂಗಿ ಧರಿಸಿರುತ್ತಾರೆ.  ಪತ್ತೆಯಾದಲ್ಲಿ ಬಂದರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News