’ದುಷ್ಟ ದಮನ’ ಕಿರು ಪ್ರಹಸನ ಪುಸ್ತಕ ಬಿಡುಗಡೆ
Update: 2020-06-17 21:46 IST
ಉಡುಪಿ, ಜೂ.17: ಉಡುಪಿ ಗ್ರಂಥಪಾಲಕರಾದ ಹರಿಕೃಷ್ಣ ರಾವ್ ಎ. ಸಗ್ರಿ ಬರೆದಿರುವ ’ದುಷ್ಟ ದಮನ’ ಕಿರು ಪ್ರಹಸನ ಪುಸ್ತಕದ ಬಿಡುಗಡೆಯು ಉಡುಪಿ ಸಂಸ್ಕ್ರತ ಕಾಲೇಜಿನ ವಾಚನಾಲಯದಲ್ಲಿ ಮಂಗಳವಾರ ನಡೆಯಿತು.
ಕೃತಿಯನ್ನು ಸಂಸ್ಕ್ರತ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಲಕ್ಷ್ಮೀನಾರಾಯಣ ಭಟ್ ಬಿಡುಗಡೆಗೊಳಿಸಿದರು. ಲೇಖಕ ಹರಿಕೃಷ್ಣ ರಾವ್ ಎ.ಸಗ್ರಿ, ಯುವ ಸಾಹಿತಿ ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು.