ಮಳೆಯಿಂದ ಮೆಸ್ಕಾಂಗೆ 3.46ಲಕ್ಷ ರೂ. ನಷ್ಟ
Update: 2020-06-17 21:51 IST
ಉಡುಪಿ, ಜೂ.17: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಯಿಂದಾಗಿ ಜೂ.16ರಂದು ಮೆಸ್ಕಾಂ ಉಡುಪಿ ವೃತ್ತ ವ್ಯಾಪ್ತಿಯಲ್ಲಿ ಒಟ್ಟು 30 ವಿದ್ಯುತ್ ಕಂಬಗಳು ಮತ್ತು ನಾಲ್ಕು ಟ್ರಾನ್ಸ್‌ಫಾರ್ಮ್‌ಗಳು ಹಾನಿಯಾಗಿ 3.46ಲಕ್ಷ ರೂ. ನಷ್ಟ ಉಂಟಾಗಿದೆ.
ಉಡುಪಿ ವಿಭಾಗದಲ್ಲಿ 25 ವಿದ್ಯುತ್ ಕಂಬಗಳು ಮತ್ತು ಮೂರು ಟ್ರಾನ್ಸ್ ಫಾರ್ಮರ್‌ಗಳು ಹಾನಿಯಾಗಿ ಒಟ್ಟು 2.76 ಲಕ್ಷ ರೂ. ಹಾಗೂ ಕುಂದಾಪುರ ವಿಭಾಗದಲ್ಲಿ 5 ಕಂಬಗಳು ಮತ್ತು ಒಂದು ಟ್ರಾನ್ಸ್‌ಫಾರ್ಮರ್ ಬಿದ್ದು 71 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.