ಯುವಕ ನಾಪತ್ತೆ
Update: 2020-06-17 21:57 IST
ಉಡುಪಿ, ಜೂ.17: ತಾಲೂಕಿನ ಪುತ್ತೂರು ಗ್ರಾಮ ವಾಸುಕಿ ನಗರದ ರವೀಂದ್ರ ಎಂ. (44) ಎಂಬವರು ಕಳೆದ ಮಾರ್ಚ್ 14ರಿಂದ ನಾಪತ್ತೆ ಯಾಗಿದ್ದಾರೆ. 165 ಸೆ.ಮೀ. ಎತ್ತರವಿದ್ದು, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ದುಂಡುಮುಖ ಹೊಂದಿದ್ದಾರೆ. ಕನ್ನಡ, ತುಳು ಮಾತನಾಡು ತ್ತಾರೆ. ಕಾಣೆಯಾದ ಸಂದರ್ಭದಲ್ಲಿ ಹಸಿರು ಮತ್ತು ಬಿಳಿ ಮಿಶಿತ್ರ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು ಬಲಲ್ಲದ ಮೇಲೆ ಕಪ್ಪು ಮಚ್ಚೆ ಇದೆ.
ಈ ವ್ಯಕ್ತಿ ಪತ್ತೆಯಾದಲ್ಲಿ ಠಾಣಾಧಿಕಾರಿಗಳು ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.