ಪುಟಿನ್‌ರನ್ನು ಕೊರೋನದಿಂದ ರಕ್ಷಿಸಲು ನಿವಾಸದ ಹೊರಗೆ ಸುರಂಗ-ದ್ವಾರ

Update: 2020-06-17 16:27 GMT

ಮಾಸ್ಕೋ (ರಶ್ಯ), ಜೂ. 17: ರಶ್ಯ ಅಧ್ಯಕ್ಷರನ್ನು ನೋವೆಲ್-ಕೊರೋನ ವೈರಸ್‌ನಿಂದ ಪಾರು ಮಾಡಲು ಮಾಸ್ಕೋದ ಹೊರವಲಯದಲ್ಲಿರುವ ಅವರ ನಿವಾಸದ ಹೊರಗೆ ವಿಶೇಷ ಸೋಂಕುನಿವಾರಕ ಸುರಂಗ-ದ್ವಾರವೊಂದನ್ನು ನಿರ್ಮಿಸಲಾಗಿದೆ. ಅವರನ್ನು ಯಾರಾದರೂ ಭೇಟಿಯಾಗಲು ಬಯಸಿದರೆ ಅವರು ಈ ಸುರಂಗ-ದ್ವಾರದ ಮೂಲಕ ಹಾದು ಹೋಗಬೇಕಾಗಿದೆ ಎಂದು ಸರಕಾರಿ ಒಡೆತನದ ಆರ್‌ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ವಿಶೇಷ ಸುರಂಗ-ದ್ವಾರವ್ನ ಪೆಂಝ ಪಟ್ಟಣದಲ್ಲಿರುವ ರಶ್ಯದ ಕಂಪೆನಿಯೊಂದು ನಿರ್ಮಿಸಿದೆ. ಅದರ ಮೂಲಕ ಮಾಸ್ಕ್ ಧರಿಸಿ ಹಾದು ಹೋಗುವ ಜನರ ಮೇಲೆ ಮೇಲಿನಿಂದ ಮತ್ತು ಬದಿಗಳಿಂದ ಸೋಂಕುನಿರೋಧಕ ದ್ರಾವಣ ಚಿಮ್ಮುವುದನ್ನು ಆರ್‌ಐಎ ಪ್ರಸಾರ ಮಾಡಿರುವ ವೀಡಿಯೊ ತುಣುಕುಗಳು ತೋರಿಸಿವೆ.

ರಶ್ಯದಲ್ಲಿ ಈವರೆಗೆ 5.29 ಲಕ್ಷಕ್ಕಿಂತಲೂ ಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಅದು ಅಮೆರಿಕ ಮತ್ತು ಬ್ರೆಝಿಲ್ ಬಳಿಕ ಮೂರನೇ ಸ್ಥಾನದಲ್ಲಿದೆ. ಅಲ್ಲಿ 7,284 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News