×
Ad

ಭಟ್ಟಳ: ಕಾರು ಪಲ್ಟಿ ; ಚಾಲಕ ಸಹಿತ 6 ಮಂದಿಗೆ ಗಾಯ

Update: 2020-06-17 22:48 IST

ಭಟ್ಟಳ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ ಚಾಲಕನ ಸಹಿತ 6 ಮಂದಿ ಗಾಯಗೊಂಡಿರುವ ಘಟನೆ ಬೈಲೂರ ಪಂಚಾಯತ್ ವ್ಯಾಪ್ತಿಯ ಗುಡಿಗದ್ದೆ ಕ್ರಾಸ್ ನಲ್ಲಿ ಜರುಗಿದೆ.

ಹೊನ್ನಾವರ ತಾಲೂಕಿನ ಮಂಕಿ ನವಾಯತ್ ಕಾಲನಿಯಿಂದ ಮುರ್ಡೇಶ್ವರಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ಗುಡಿಗದ್ದೆ ಕ್ರಾಸ ಸಮೀಪದ ಕಿರುಬಚ್ಚಲು ಸೆತುವೆ ಸಮೀಪ ತಿರುವಿನಲ್ಲಿ ಪಲ್ಟಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನುಜ್ಜುಗೊಂಡಿದೆ. ಗಾಯಗೊಂಡ ಚಾಲಕ ಸಹಿತ 6 ಮಂದಿಯನ್ನು ಮುರ್ಡೇಶ್ವರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ಈ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News