×
Ad

ಬೆಳ್ತಂಗಡಿ; ಮೃತ ಯೋಧನ ಅಂತಿಮ ಸಂಸ್ಕಾರ

Update: 2020-06-17 23:03 IST

ಬೆಳ್ತಂಗಡಿ;  ಹೃದಯಾಘಾತದಿಂದ ಮೃತೊಟ್ಟ  ತಾಲೂಕು ಬಾರ್ಯ ಗ್ರಾಮದ ಅಲಿಂಗಿರ ಮನೆ ನಿವಾಸಿ, ಭಾರತೀಯ ಸೇನೆಯ ಯೋಧ ಸಂದೇಶ್ ಶೆಟ್ಟಿ (34ವ) ಅವರ ಮೃತದೇಹವನ್ನು ಇಂದು ಬಾರ್ಯದ ಮನೆಗೆ ತರಲಾಗಿದ್ದು ಮನೆಯಲ್ಲಿ ಅಂತಿಮ ಸಂಸ್ಕಾರ ನಡೆಯಿತು.

ರಜೆಯಲ್ಲಿ ಊರಿಗೆ ಬಂದಿದ್ದ ಅವರು ಸೋಮವಾರವಷ್ಟೇ ಕರ್ತವ್ಯಕ್ಕೆಂದು ಉತ್ತರ ಪ್ರದೇಶದ ಮಥುರಾಕ್ಕೆ ತೆರಳಿದ್ದರು. ಅಲ್ಲಿ ಕ್ವಾರೆಂಟೈನ್ ಕೇಂದ್ರದಲ್ಲಿ ಇರುವಾಗಲೇ ಹೃದಯಾಘಾತವಾಗಿ ನಿಧನ ಹೊಂದಿದ್ದರು.

ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News