ಭಾರತ ಜತೆ ಘರ್ಷಣೆಯಲ್ಲಿ ಚೀನಾದ 35 ಸೈನಿಕರ ಸಾವು : ಅಮೆರಿಕ ಮಾಧ್ಯಮ

Update: 2020-06-18 05:08 GMT

ವಾಷಿಂಗ್ಟನ್ : ಭಾರತ- ಚೀನಾ ಗಡಿ ಪರಿಸ್ಥಿತಿಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಮೆರಿಕ ಹೇಳಿದೆ. ಪೂರ್ವ ಲಡಾಖ್‌ನಲ್ಲಿ ಭಾರತ- ಚೀನಾ ಸೇನೆಗಳ ನಡುವೆ ನಡೆದ ಸಂಘರ್ಷದಲ್ಲಿ ಚೀನಾದ ಕನಿಷ್ಠ 35 ಮಂದಿ ಸೈನಿಕರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಗುಪ್ತಚರ ವಿಭಾಗದ ಅಂದಾಜನ್ನು ಉಲ್ಲೇಖಿಸಿ ಸಾವಿನ ಸಂಖ್ಯೆ 35 ಇರಬಹುದು ಎಂದು ಹೇಳಿವೆ. ಚೀನಾಗೆ ಈ ಅಪಾರ ಸಾವು ನೋವಿನಿಂದ ಮುಖಭಂಗವಾಗಿದ್ದು, ಈ ಕಾರಣಕ್ಕೆ ಸಾವಿನ ಸಂಖ್ಯೆಯನ್ನು ದೃಢಪಡಿಸುತ್ತಿಲ್ಲ ಎಂದು ಯುಎಸ್ ನ್ಯೂಸ್ ಹೇಳಿದೆ.

ಅಮೆರಿಕದ ಗುಪ್ತಚರ ವಿಭಾಗ ಗಡಿಯಲ್ಲಿ ಉಭಯ ಸೇನೆಗಳ ಮುಖಂಡರ ಜತೆ ಚರ್ಚಿಸಿ ಪರಿಸ್ಥಿತಿ ಶಮನಗೊಳಿಸುವ ಪ್ರಯತ್ನ ಮಾಡುತ್ತಿದೆ. ಬಹುತೇಕ ಸಾವುಗಳು ಬ್ಯಾಟನ್‌ಗಳಿಂದ, ಚೂರಿಯಿಂದ ಅಥವಾ ದೊಡ್ಡ ಕಂದಕಕ್ಕೆ ಬಿದ್ದು ಸಂಭವಿಸಿವೆ ಎಂದು ವಿವರಿಸಿದೆ.

ಭಾರತ ಮತ್ತು ಚೀನಾ ವಾಸ್ತವ ನಿಯಂತ್ರಣ ರೇಖೆಯ ಪ್ರದೇಶದಲ್ಲಿ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. 20 ಸೈನಿಕರು ಮೃತಪಟ್ಟಿರುವುದನ್ನು ಭಾರತ ಪ್ರಕಟಿಸಿದೆ. ಅವರ ಕುಟುಂಬಗಳಿಗೆ ನಾವು ಸಾಂತ್ವನ ಹೇಳುತ್ತಿದ್ದೇವೆ. ಬಿಕ್ಕಟ್ಟು ಶಮನಗೊಳಿಸಲು ಉಭಯ ದೇಶಗಳು ಅಪೇಕ್ಷೆ ವ್ಯಕ್ತಪಡಿಸಿವೆ. ಪ್ರಸ್ತುತ ಸ್ಥಿತಿಯನ್ನು ಶಾಂತಿಯುತವಾಗಿ ಬಗೆಹರಿಸಲು ನಮ್ಮ ಬೆಂಬಲವಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News