×
Ad

ಬೈಂದೂರು ತಾಲೂಕು ಕಚೇರಿ ಅಭಿವೃದ್ಧಿಗೆ ಜೆಡಿಎಸ್ ಮನವಿ

Update: 2020-06-18 17:54 IST

ಬೈಂದೂರು, ಜೂ.18: ಬೈಂದೂರು ತಾಲೂಕು ಕಚೇರಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳನ್ನು ಬೈಂದೂರಿನಲ್ಲಿ ಕೂಡಲೇ ಸ್ಥಾಪಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ವತಿಯಿಂದ ಕುಂದಾಪುರ ತಹಶೀಲ್ದಾರ್ ಆನಂದಪ್ಪ ನಾಯ್ಕ್ ಮೂಲಕ ಮುಖ್ಯಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಕುಂಠಿತಗೊಂಡಿದ್ದು ತಾಲೂಕು ರಚನೆಗೊಂಡು ಎರಡೂವರೆ ವರ್ಷ ಕಳೆದರೂ ಬೈಂದೂರಿ ನಲ್ಲಿ ಯಾವುದೇ ಕಚೇರಿ ಆರಂಭಗೊಂಡಿಲ್ಲ. ಆದುದರಿಂದ ಬೈಂದೂರು ಪಟ್ಟಣ ಪಂಚಾಯತ್ ಕಚೇರಿಯನ್ನು ಕೂಡಲೇ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮನ್ಸೂರ್ ಇಬ್ರಾಹಿಂ, ಕುಂದಾಪುರ ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಹುಸೇನ್ ಹೈಕಾಡಿ, ಉಡುಪಿ ಜಿಲ್ಲಾ ಜೆಡಿಎಸ್ ಮಾಹಿತಿ ತಂತ್ರ ಜ್ಞಾನ ಘಟಕದ ಅಧ್ಯಕ್ಷ ಮಕ್ದುಂ ಬೈಂದೂರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News