ಎಸ್‌ಡಿಪಿಐ ಸಂಸ್ಥಾಪನಾ ದಿನ : ಜೂ.21ರಂದು ಚೊಕ್ಕಬೆಟ್ಟುವಿನಲ್ಲಿ ಬೃಹತ್ ರಕ್ತದಾನ ಶಿಬಿರ
Update: 2020-06-18 22:20 IST
ಮಂಗಳೂರು, ಜೂ.18: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪನಾ ದಿನದ ಪ್ರಯುಕ್ತ ಎಸ್‌ಡಿಪಿಐ 5ನೇ ವಾರ್ಡ್‌ನಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಜೂ.21ರಂದು ಬೆಳಗ್ಗೆ 9ಕ್ಕೆ ಚೊಕ್ಕಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
‘ರಕ್ತ ನೀಡೋಣ.. ಜೀವ ಉಳಿಸೋಣ.. ನಾವು ಪರಸ್ಪರ ರಕ್ತ ಸಂಬಂಧಿಗಳಾಗೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಶಿಬಿರ ಆಯೋಜಿಸಿದೆ. ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ರಕ್ತದಾನ ಮಾಡಿ ಸಮಾಜಕ್ಕೆ ನೆರವಾಗಬಹುದಾಗಿದೆ. ಮಧ್ಯಾಹ್ನ 2ರವರೆಗೆ ರಕ್ತದಾನಕ್ಕೆ ಸಮಯ ನಿಗದಿಪಡಿಸಿದೆ ಎಂದು ಎಸ್‌ಡಿಪಿಐ 5ನೇ ವಾರ್ಡ್ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.