ಪಿಪಿಇ ಸೂಟ್ ಧರಿಸಿ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಕೊರೋನ ಸೋಂಕಿತ ಶಾಸಕ

Update: 2020-06-19 12:28 GMT
Photo: NDTV

ಭೋಪಾಲ್: ಕೊರೋನವೈರಸ್ ಸೋಂಕು ತಗಲಿರುವ ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ಕುನಾಲ್ ಚೌಧುರಿ ಇಂದು ನಡೆಯುತ್ತಿರುವ ರಾಜ್ಯಸಭಾ ಚುನಾವಣೆಗೆ ಭೋಪಾಲದ ವಿಧಾನಸಭೆಯಲ್ಲಿ ತಮ್ಮ ಮತ ಚಲಾಯಿಸಲು ಪಿಪಿಇ ಧರಿಸಿ ಆಗಮಿಸಿದ್ದಾರೆ.

ರಾಜ್ಯದ ಕನಿಷ್ಠ 205 ಶಾಸಕರು ತಮ್ಮ ಮತಗಳನ್ನು ಚಲಾಯಿಸಿದ ನಂತರ ಚೌಧುರಿ ಪಿಪಿಇ ಧರಿಸಿ ಆಗಮಿಸಿ ಮತ ಚಲಾಯಿಸಿದರು. ಅವರು ಅಲ್ಲಿಗೆ ಆಗಮಿಸಿದಾಗ ಸುತ್ತ ಇದ್ದವರೆಲ್ಲರೂ ಅವರಿಗಿಂತ ದೂರ ನಿಂತಿದ್ದರು.

ಜೂನ್ 6ರಿಂದ ಶಾಸಕರಿಗೆ ಅಸೌಖ್ಯ ಕಾಡಿದ್ದು ನಾಲ್ಕು ದಿನಗಳ ನಂತರ  ಕೋವಿಡ್ ಪರೀಕ್ಷೆಗೊಳಗಾಗಿದ್ದರು. ಅವರಿಗೆ ಕೋವಿಡ್-19 ಇರುವುದು ಜೂನ್ 12ರಂದು ದೃಢಪಟ್ಟಿತ್ತು,.

ಕೊರೋನ ಪಾಸಿಟಿವ್ ವ್ಯಕ್ತಿಯೊಬ್ಬರಿಗೆ ಮತ ಚಲಾಯಿಸಲು  ಚುನಾವಣಾ ಆಯೋಗ ಹೇಗೆ ಅನುಮತಿ ನೀಡಿತೆಂದು ಬಿಜೆಪಿ ನಾಯಕ ಹಿತೇಶ್ ಬಾಜಪೇಯಿ ಪ್ರಶ್ನಿಸಿದ್ದಾರಲ್ಲದೆ, ಇದು ಸಾಂಕ್ರಾಮಿಕ ರೋಗ ತಡೆ ಕಾಯಿದೆಯ ಉಲ್ಲಂಘನೆಯಾಗಿದೆ ಎಂದೂ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕುನಾಲ್ ಚೌಧುರಿ “ಪಂಚಾಯತ್ ಚುನಾವಣೆಯನ್ನೂ ಗೆಲ್ಲಲಾಗದವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ,  ಸರಕಾರ ನಡೆಸುತ್ತಿರುವ ಅವರ ಪಕ್ಷದ ನಾಯಕರನ್ನು ಅವರು ಪ್ರಶ್ನಿಸಬೇಕು'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News