ವಾಟ್ಸ್‌ಆ್ಯಪ್ ಗ್ರೂಪ್ ಮೆಹೆಂದಿ ಸ್ಪರ್ಧೆ ವಿಜೇತರು

Update: 2020-06-19 14:03 GMT
ಸಾಂದರ್ಭಿಕ ಚಿತ್ರ

ಮಂಗಳೂರು : ‘ಬೆಸ್ಟೀಸ್’ ವಾಟ್ಸ್‌ಆ್ಯಪ್ ಗ್ರೂಪ್ ಇತ್ತೀಚೆಗೆ ಮಹಿಳೆಯರಿಗಾಗಿ ಮೆಹೆಂದಿ ಸ್ಪರ್ಧೆಯನ್ನು ಆಯೋಜಿಸಿದ್ದು, ಅದರಲ್ಲಿ ಕಾಸರಗೋಡಿನ ಅಮ್ನಾಸ್ ಎಂಬವರು ವಿಜೇತರಾಗಿದ್ದಾರೆ.

ವಿಜೇತರಿಗೆ 3,000 ರೂ. ನಗದು ಬಹುಮಾನವನ್ನು ವಾಟ್ಸ್‌ಆ್ಯಪ್ ಗ್ರೂಪ್‌ನ ಮೂಲಕ ನೀಡಲಾಗಿದೆ. ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಆಗಿ ವಿಟ್ಲದ ಕಂಬಳಬೆಟ್ಟುವಿನ ಖದೀಜತುಲ್ ಫಿದಾ 2000 ರೂ. ನಗದು ಬಹುಮಾನ ಹಾಗೂ ದ್ವಿತೀಯ ರನ್ನರ್ ಅಪ್ ಆಗಿ ಮಂಜೇಶ್ವರ ತೂಮಿನಾಡಿನ ರೆಹನಾ ಹನೀನ್ ಶೈಕ್ 1,000 ರೂ. ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಲ್ಲದೆ ಕೈರಂಗಳದ ಶಬಾನಾ ಹಫ್ಸಾ, ಮೊಗ್ರಾಲ್ ಪುತ್ತೂರಿನ ರುಕ್ಯತ್ ನಿಹಾಲ, ಬಿ.ಸಿ.ರೋಡ್‌ನ ಶೈನಾಝ್ ಎಂ., ಕಾಸರಗೋಡು ವಿದ್ಯಾ ನಗರದ ಅಸ್ಮತ್ ಫಾತಿಮಾ ಫಮ್ನಾಝ್ ತಲಾ 500 ರೂ.ಗಳ ಸಮಾಧಾನರ ಬಹುಮಾನ ಪಡೆದಿದ್ದಾರೆ.

ಬೆಸ್ಟೀಸ್ ವಾಟ್ಸ್ ಆ್ಯಪ್ ಗ್ರೂಪ್ ವತಿಯಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯನ್ನು ಆಯಿಶ ಅಶ್ರಫ್, ಡಾ. ಅನೀಶಾ, ಸಮಿದಾ ಹಾಗೂ ಶೈನಾಝ್ ಸಂಘಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News