×
Ad

ನಕಲಿ ನೇಮಕಾತಿ ನೋಟಿಸ್: ಅಂಚೆ ಇಲಾಖೆಯ ಎಚ್ಚರಿಕೆ

Update: 2020-06-19 22:15 IST

ಹೊಸದಿಲ್ಲಿ,ಜೂ.19: ಖಾಸಗಿ ಉದ್ಯೋಗ ಜಾಲತಾಣವೊಂದು ಶೇರ್ ಮಾಡಿಕೊಂಡಿರುವ ನಕಲಿ ನೇಮಕಾತಿ ನೋಟಿಸಿನ ಬಗ್ಗೆ ಭಾರತೀಯ ಅಂಚೆ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ.

ಕಾರು ಚಾಲಕ,ಗ್ರಾಮೀಣ ಡೆಸ್ಕ್ ಸೇವಕ್ ಮತ್ತು ಆಡಳಿತಾತ್ಮಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಂಚೆ ಇಲಾಖೆಯು ಪ್ರಕಟಿಸಿದೆ ಎಂದು ಈ ನೋಟಿಸ್‌ನಲ್ಲಿ ಹೇಳಲಾಗಿದೆ. ಈ ನೋಟಿಸ್ ನಕಲಿಯಾಗಿದೆ ಮತ್ತು ಇಂತಹ ಹುದ್ದೆಗಳಿಗೆ ನೇಮಕಾತಿ ಮಾಡುವ ಬಗ್ಗೆ ತಾನು ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ ಎಂದು ಅಂಚೆ ಇಲಾಖೆಯು ದೃಢಪಡಿಸಿದೆ.

ವಿಶ್ವದ ಬೃಹತ್ ಅಂಚೆ ಜಾಲಗಳಲ್ಲೊಂದಾಗಿರುವ ಇಂಡಿಯಾ ಪೋಸ್ಟ್ ತನ್ನ ಅಧಿಕೃತ ಜಾಲತಾಣದ ಮೂಲಕ ನೇಮಕಾತಿಗಳ ಬಗ್ಗೆ ಪ್ರಕಟಿಸುತ್ತದೆ. ಸದ್ಯ ಅದು ಗ್ರಾಮೀಣ ಡೆಸ್ಕ್ ಸೇವಕ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಇವು ಶಾಖಾ ಪೋಸ್ಟ್‌ಮಾಸ್ಟರ್, ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ ಮತ್ತು ಡಾಕ್ ಸೇವಕ್ ಹುದ್ದೆಗಳಾಗಿವೆ. ಗಣಿತವನ್ನು ಒಂದು ವಿಷಯವನ್ನಾಗಿಸಿಕೊಂಡು 10ನೇ ತರಗತಿಯಲ್ಲಿ ತೇರ್ಗಡೆಯಾಗಿರುವ,ಇಂಗ್ಲೀಷ್ ಮತ್ತು ಸ್ಥಳೀಯ ಭಾಷೆ ಬಲ್ಲವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News