ಮೊಂಟೆಪದವು : ಕೋವಿಡ್ 19 ಕುರಿತು ಜಾಗೃತಿ, ಸಂವಾದ ಕಾರ್ಯಕ್ರಮ
ಮೊಂಟೆಪದವು : ಕೋವಿಡ್ 19 ಕುರಿತಂತೆ ಜಾಗೃತಿ ಮತ್ತು ಯೆನಪೋಯ ಆಸ್ಪತ್ರೆ ಆರಂಭಿಸಿರುವ ಮನೆ ಬಾಗಿಲಿಗೆ ಆಸ್ಪತ್ರೆ ಸೇವೆಗಳ ಕುರಿತಂತೆ ಮಾಹಿತಿ ಮತ್ತು ಗ್ರಾಮಸ್ಥರೊಂದಿಗೆ ಸಂವಾದ ಕಾರ್ಯಕ್ರಮವು ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಮತ್ತು ಯುನೈಟೆಡ್ ಬ್ರದರ್ಸ್ ಚಂದಹಿತ್ಲು ಹಾಗೂ ಯೆನಪೋಯ ಆಸ್ಪತ್ರೆಯ ಸಹಯೋಗದೊಂದಿಗೆ ಎಸ್ಸೆಸ್ಸೆಫ್ ಮರಿಕ್ಕಳ ಕಚೇರಿಯಲ್ಲಿ ನಡೆಯಿತು.
ಸಭೆಯನ್ನು ಯೆನೆಪೋಯ ಮಾರ್ಕೆಟಿಂಗ್ ಮ್ಯಾನೇಜರ್ ವಿಜಯಾನಂದ್ ಶೆಟ್ಟಿ ಉದ್ಘಾಟಿಸಿದರು. ಯೆನಪೋಯ ಆಸ್ಪತ್ರೆಯ ಅಸಿಸ್ಟೆಂಟ್ ಮೆಡಿಕಲ್ ಸೂಪರಿಟೆಂಡೆಂಟ್ ಡಾ.ನಾಗರಾಜ್ ಶೇಟ್ ಮಾತನಾಡಿ ಆಸ್ಪತ್ರೆಯಿಂದ 30 ಕಿಮೀ ವ್ಯಾಪ್ತಿಯಲ್ಲಿರುವ ನಾಗರಿಕರಿಗೆ ಆಸ್ಪತ್ರೆಯ ವತಿಯಿಂದ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಮನೆ ಬಾಗಿಲಿಗೆ ಔಷಧ , ವೈದ್ಯರ ಸೇವೆ ಮತ್ತು ಹಿರಿಯ ನಾಗರಿಕರಿಗೆ ನಿಯಮಿತ ಪರೀಕ್ಷೆಗಳನ್ನು ನಡೆಸಲಾಗುವುದು. ನಾಗರಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಸಭೆಯಲ್ಲಿ ಯೆನಪೋಯ ಸಂಸ್ಥೆಯ ಅಧಿಕಾರಿ ಶಿವಪ್ರಸಾದ್ , ಶಾಫಿ, ಧನಂಜಯ, ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಅಧ್ಯಕ್ಷ ಅಝರ್ ಅಗಲ್ತಬೆಟ್ಟು, ಯುಬಿಸಿ ಚಂದಹಿತ್ಲು ಅಧ್ಯಕ್ಷ ಹನೀಫ್ ಶೈನ್ ಚಂದಹಿತ್ಲು, ಎಸ್ ವೈ ಎಸ್ ಮರಿಕ್ಕಳ ಅಧ್ಯಕ್ಷ ಅಲಿಕುಂಞಿ ಅಗಲ್ತಬೆಟ್ಟು, ಮರಿಕ್ಕಳ ಜಮಾಅತ್ ಕಾರ್ಯದರ್ಶಿ ಅಬ್ಬಾಸ್ ಎನ್ ಎಚ್ ಚಂದಹಿತ್ಲು, ಸ್ಥಳೀಯರಾದ ಬಶೀರ್ ಮೋಂಟುಗೋಳಿ, ಖಲೀಲ್ ಚಂದಹಿತ್ಲು, ಯೂನುಸ್ ಸಖಾಫಿ, ಪದ್ಮನಾಭ ನರಿಂಗಾನ, ಮನ್ಸೂರ್ ಚಂದಹಿತ್ಲು, ಅಬ್ಬಾಸ್ ನಿಡ್ಮಾಡ್, ಖಾದರ್ ಮೊಂಟೆಪದವು , ಹನೀಫ್ ಪಡಿಕ್ಕಲ್ ಹಾಗೂ ಮಜೀದ್ ಚಂದಹಿತ್ಲು ಉಪಸ್ಥಿತರಿದ್ದರು.
ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ರಹಿಮಾನ್ ಸಿಎಚ್ ಚಂದಹಿತ್ಲು ಸ್ವಾಗತಿಸಿ, ಯುನೈಟೆಡ್ ಬ್ರದರ್ಸ್ ಚಂದಹಿತ್ಲು ಕಾರ್ಯದರ್ಶಿ ಶಾಕೀರ್ ಸಿಎಚ್ ವಂದಿಸಿದರು.