ಬೋಳಿಯಾರು: ನದಿಯಲ್ಲಿ ಮುಳುಗಿ ಬಾಲಕ ಮೃತ್ಯು
Update: 2020-06-20 15:12 IST
ಮಂಗಳೂರು, ಜೂ. 20: ಬೋಳಿಯಾರು ಗ್ರಾಮದ ಧರ್ಮನಗರ ಸಮೀಪದ ಜಲಕದಕಟ್ಟೆ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕನೊಬ್ಬ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕೊಣಾಜೆ ಸಮೀಪದ ನಡುಪದವು ನಿವಾಸಿ ಫಾಝಿಲ್ (15) ಮೃತಪಟ್ಟ ಬಾಲಕ.
ಈತ ಇಲ್ಲಿನ ತೋಟವೊಂದರ ಕೆಲಸಕ್ಕೆ ಸ್ನೇಹಿತರ ಜೊತೆಗೂಡಿ ತೆರಳಿದ್ದ ಎನ್ನಲಾಗಿದೆ. ತೋಟದಲ್ಲಿ ತೆಂಗಿನಕಾಯಿ ಹೆಕ್ಕಿದ ಬಳಿಕ ತೋಟದ ಪಕ್ಕವೇ ಹರಿಯುವ ನದಿ ಕಿನಾರೆಯ ಬಳಿ ತೆರಳಿ ಕೈಕಾಲು ತೊಳೆಯಲು ಮುಂದಾಗಿದ್ದ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ತಕ್ಷಣ ಆಸುಪಾಸು ಇದ್ದ ಯುವಕರು ಹುಡುಕಾಟ ಆರಂಭಿಸಿದ್ದು, ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಕೊಣಾಜೆ ಪೊಲೀಸರು ಧಾವಿಸಿದ್ದಾರೆ.