ಪುತ್ತೂರು ನಗರಸಭೆ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ
Update: 2020-06-20 18:01 IST
ಪುತ್ತೂರು: ವಿಸ್ತರಿತ ನಗರಸಭಾ ವ್ಯಾಪ್ತಿಯ 10 ವಾರ್ಡುಗಳ ಸಂಪರ್ಕ ರಸ್ತೆಗಳ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರು ಶನಿವಾರ ಶಿಲಾನ್ಯಾಸ ನಡೆಸಿದರು.
ಈ ಸಂದರ್ಭ ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಬಿಜೆಪಿ ನಗರಮಂಡಲ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ವಿದ್ಯಾ ಆರ್. ಗೌರಿ, ಪ್ರೇಮ್‍ಕುಮಾರ್, ಬಿ. ರೋಹಿಣಿ, ಮಮತಾ ರಂಜನ್, ಬಾಲಚಂದ್ರ, ಮನೋಹರ್ ಕಲ್ಲಾರೆ, ಪೂರ್ಣಿಮ ಕೋಡಿಯಡ್ಕ, ಶೀನಪ್ಪ ನಾಯ್ಕ, ಶಶಿಕಲಾ ಸಿ.ಎಚ್., ಇಂದಿರಾ ಆಚಾರ್ಯ, ದೀಕ್ಷಾ ಪೈ ಮತ್ತಿತರರು ಉಪಸ್ಥಿತರಿದ್ದರು.