×
Ad

ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2020-06-20 21:49 IST

ಕೋಟ, ಜೂ.20: ವಯೋ ಸಹಜ ಖಾಯಿಲೆ ಹಾಗೂ 6 ವರ್ಷಗಳ ಹಿಂದೆ ಮಗ ರಸ್ತೆ ಅಪಘಾತದಿಂದ ಮೃತಪಟ್ಟಿರುವ ಬಗ್ಗೆ ಮಾನಸಿಕವಾಗಿ ನೊಂದ ಕಾರ್ಕಡ ಗ್ರಾಮದ ಭಟ್ರಕಟ್ಟೆ ತುಂಗಾ ಪೂಜಾರ್ತಿ(78) ಎಂಬವರು ಜೂ.19 ರಂದು ಬೆಳಗ್ಗೆ ಮನೆಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಮುಡಾರು ಗ್ರಾಮದ ರಾಮೆಟ್ಟು ಪಲ್ಕೆಯ ಗೋಪ ಮೂಲ್ಯ(85) ಎಂಬವರು ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ಜೂ.20ರಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗೊಳ್ಳಿ: ಕಳೆದ ಐದು ವರ್ಷಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದ ನಾಡ ಗ್ರಾಮದ ಕೋಣ್ಕಿ ಮೂಡ್ಬೆಟ್ಟು ನಿವಾಸಿ ಸಿಂಗಾರಿ ಶೆಡ್ತಿ(52) ಎಂಬವರು  ಜೂ.20ರಂದು ಬೆಳಿಗ್ಗೆ ಮನೆಯ ಹಿಂದುಗಡೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News