ಉಡುಪಿ: ಪರಂಪರಾಗತ ಕೃಷಿ ವಿಕಾಸ ಯೋಜನೆ ಮಾಹಿತಿ ಕಾರ್ಯಾಗಾರ

Update: 2020-06-20 17:53 GMT

ಉಡುಪಿ, ಜೂ.20: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಬ್ರಹ್ಮಾವರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಕಾರ್ಯಕ್ರಮದಡಿ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಮಾಹಿತಿ ಕಾರ್ಯಗಾರವನ್ನು ಜೂ.19 ರಂದು ಸಾಣೂರು ಯುವಕ ಮಂಡಲದ ಹೊರ ಆವರಣದಲ್ಲಿ ಆಯೋಜಿಸಲಾಗಿತ್ತು.

ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥ ಡಾ.ಬಿ.ಧನಂಜಯ, ಪರಂಪರಾಗತ ಕೃಷಿ ವಿಕಾಸ ಯೋಜನೆಯ ಸಾಧಕ ಬಾಧಕಗಳ ಸಂಪೂರ್ಣ ವಿವರದೊಂದಿಗೆ ಜೀವಾಮೃತ ತಯಾರಿ ಮತ್ತು ಅದರ ಬಳಕೆಯ ಉಪಯೋಗಗಳನ್ನು ತಿಳಿಸಿದರು.

ವಿಜ್ಞಾನಿ (ಬೇಸಾಯ ಶಾಸ್ತ್ರ) ಡಾ. ನವೀನ್.ಎನ್.ಇ., ಎರೆಜಲ ತಯಾರಿ ಮತ್ತು ಅದರ ಬಳಕೆ ಹಾಗೂ ಜೈವಿಕ ಗೊಬ್ಬರಗಳ ಕುರಿತಾದ ಸಂಪೂರ್ಣ ಮಾಹಿತಿ ನೀಡಿದರು. ವಿಜ್ಞಾನಿ(ಸಸ್ಯ ಸಂರಕ್ಷಣೆ) ಡಾ.ಸಚಿನ್.ಯು.ಎಸ್., ಜೈವಿಕ ಗೊಬ್ಬರಗಳ ಬಳಕೆ, ಕೀಟ ಮತ್ತು ರೋಗದ ಬಾಧೆ ತಡೆಗಟ್ಟುವಲ್ಲಿ ಅವುಗಳ ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನರಸಿಂಹ ಕಾಮತ್ ವಹಿಸಿದ್ದರು. ಕಾರ್ಕಳ ತಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸಾಣೂರು ಯುವಕ ಮಂಡಲ ಅಧ್ಯಕ್ಷ ಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು. ಜ್ಞಾನದೇವ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News