ಹೂವಿನ ಬೆಳೆಗಾರರಿಗೆ ನಷ್ಟ ಪರಿಹಾರ: ಅರ್ಜಿ ಸಲ್ಲಿಕೆಗೆ ಜೂ.29 ಕೊನೆಯ ದಿನ
ಉಡುಪಿ, ಜೂ.20: ಕೋವಿಡ್-19 ಕಾರಣ ದೇಶದಲ್ಲಿ ವಿಧಿಸಿರುವ ಲಾಕ್ ಡೌನ್‌ನಿಂದ ಹೂವಿನ ಬೇಳೆಗಾರರಿಗೆ ಉಂಟಾದ ನಷ್ಟಕ್ಕೆ ಹೆಕ್ಟೇರ್‌ಗೆ 25,000ರೂ. ಪರಿಹಾರವನ್ನು ಗರಿಷ್ಟ ಒಂದು ಹೆಕ್ಟೇರ್‌ಗೆ 2019-20ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ಮಾಹಿತಿಯ ಆಧಾರದಲ್ಲಿ ಪಾವತಿಸಲು ಸರಕಾರ ಸೂಚಿಸಿದ್ದು, ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಹಾಗೂ ಇಲಾಖೆಯ ತಂತ್ರಾಂಶದಲ್ಲಿ ನೋಂದಣೆಯಾಗಿರುವ ಹಾಗೂ ನೊಂದಣೆಯಾಗದೆ ಇರುವ ರೈತರ ವಿವರವನ್ನು ಈಗಾಗಲೇ ಗ್ರಾಪಂ, ತಾಲೂಕು ಕಛೇರಿ ಹಾಗೂ ತೋಟ ಗಾರಿೆ ಇಲಾಖೆ ಕಛೇರಿಗಳಲ್ಲಿ ಪ್ರಕಟಿಸಿದೆ.
ನೊಂದಣೆಯಾಗದೇ ಇರುವ ರೈತರಿಂದ ಆಧಾರ್ ಪ್ರತಿ, ಬ್ಯಾಂಕ್ ಪುಸ್ತಕದ ಪ್ರತಿ, ಮೊಬೈಲ್ ಸಂಖ್ಯೆಗಳನ್ನು ತಾಲೂಕು ತೋಟಗಾರಿಕೆ ಇಲಾಖಾ ಕಛೇರಿಗೆ ಒದಗಿಸಲು ಕೋರಲಾಗಿತ್ತು. ಈ ಮೂಲಕ ಜಿಲ್ಲೆಯ ರೈತರು ಬೆಳೆ ಸಮೀಕ್ಷೆ ಯಲ್ಲಿ ಪುಷ್ಪಬೆಳೆ ನಮೂದಾಗಿರುವ ಹಾಗೂ ಇಲಾಖೆಯ ತಂತ್ರಾಶದಲ್ಲಿ ನೋಂದಣೆಯಾಗದ ರೈತರು ಆಧಾರ್ ಪ್ರತಿ, ಬ್ಯಾಂಕ್ ಪುಸ್ತಕದ ಪ್ರತಿ, ಮೊಬೈಲ್ ಸಂಖ್ಯೆಯ ವಿವರಗಳನ್ನು ಸಂಬಂಧಿಸಿದ ತಾಲೂಕು ತೋಟಗಾರಿಕೆ ಕಚೇರಿಗೆ ಜೂ.29 ರೊಳಗಾಗಿ ಸಲ್ಲಿಸಿ ಪರಿಹಾರವನ್ನು ಪಡೆಯಬೇಕಾಗಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು(ಜಿ.ಪಂ.), ಉಡುಪಿ ಜಿಲ್ಲೆ: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಉಡುಪಿ ತಾಲೂಕು: 0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ.), ಕುಂದಾಪುರ ತಾಲೂಕು: 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಕಾರ್ಕಳ ತಾಲೂಕು:08258-230288 ಅವರನ್ನು ಸಂಪರ್ಕಿಸು ವಂತೆ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.