×
Ad

ಅಗ್ನಿಶಾಮಕ ಇಲಾಖೆ: 1567 ಹುದ್ದೆಗಳಿಗೆ ಅರ್ಜಿ ಆಹ್ವಾನ

Update: 2020-06-20 23:27 IST

ಉಡುಪಿ, ಜೂ.20: ಕರ್ನಾಟಕ ರಾಜ್ಯ ಅಗ್ನಿಶಾಮಕಮತ್ತು ತುರ್ತು ಸೇವೆಗಳ ಇಲಾಖೆಯ ವಿವಿಧ ವೃಂದಗಳ ಅಗ್ನಿಶಾಮಕ ಸಿಬ್ಬಂದಿಯ 1567 ಹುದ್ದೆಗಳಿಗೆ ಅರ್ಹ ಮತ್ತು ಅಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅಗ್ನಿಶಾಮಕ ಠಾಣಾಧಿಕಾರಿಗಳ 36 ಹುದ್ದೆಗಳು, ಅಗ್ನಿಶಾಮಕ ಚಾಲಕರ 227 ಹುದ್ದೆಗಳು, ಚಾಲಕ ತಂತ್ರಜ್ಞರ 82 ಹುದ್ದೆಗಳು ಹಾಗೂ ಅಗ್ನಿಶಾಮಕರ 1222 ಹುದ್ದೆಗಳಿಗೆ ನೇಮಕಾತಿ ಒಳಗೊಂಡಿದೆ.

ಅಂತರ್ಜಾಲ ತಾಣ -www.ksp.gov.in -ಲಾಗ್‌ಇನ್ ಆಗಿ ಜೂನ್ 22ರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಜುಲೈ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News