ಬೆಳ್ತಂಗಡಿ: ಮಿನಿ ಗೂಡ್ಸ್ ವಾಹನ ಪಲ್ಟಿ; ಚಾಲಕ ಪಾರು

Update: 2020-06-20 18:40 GMT

ಬೆಳ್ತಂಗಡಿ, ಜೂ.20: ನಿಯಂತ್ರಣ ತಪ್ಪಿದ ಮಿನಿ ಗೂಡ್ಸ್ ವಾಹನವೊಂದು ಪಲ್ಟಿಯಾದ ಘಟನೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಅಲ್ಯೂಮಿನಿಯಂ ವಸ್ತುಗಳನ್ನು ಹೇರಿಕೊಂಡು ಸಾಗುತ್ತಿದ್ದ ಮಿನಿ ಗೂಡ್ಸ್ ವಾಹನ ಚಾರ್ಮಾಡಿ ಘಾಟ್‌ನಲ್ಲಿ ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.

ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕೂಡಲೇ ಧಾವಿಸಿದ ಸ್ಥಳೀಯ ಸಮಾಜ ಸೇವಕ, ಚಾರ್ಮಾಡಿ ಹಸನಬ್ಬ ಜಖಂ ಆಗಿದ್ದ ವಾಹನ ಮೇಲೆತ್ತಲು ಸಹಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News