ಭಾರತ- ಚೀನಾ ಸಂಘರ್ಷ: ಮಾತುಕತೆಗೆ ಮುಂದಾದ ಅಮೆರಿಕ

Update: 2020-06-21 03:59 GMT

ವಾಷಿಂಗ್ಟನ್, ಜೂ.21: ಭಾರತ- ಚೀನಾ ಸಂಘರ್ಷದ ವಿಚಾರಕ್ಕೆ ಧಾವಿಸಿದ ಅಮೆರಿಕ, ಎರಡು ಏಷ್ಯನ್ ದೇಶಗಳು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿವೆ. ಇದನ್ನು ಬಗೆಹರಿಸಿಕೊಳ್ಳಲು ಅಮೆರಿಕ ನೆರವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

ಮಧ್ಯಸ್ಥಿಕೆ ವಿಚಾರವನ್ನು ನೇರವಾಗಿ ಅಮೆರಿಕ ಅಧ್ಯಕ್ಷರು ಪ್ರಸ್ತಾಪಿಸದಿದ್ದರೂ, ಅಮೆರಿಕ ಈ ವಿಚಾರದಲ್ಲಿ ಉಭಯ ದೇಶಗಳ ಜತೆ ಮಾತುಕತೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಸಂಕಷ್ಟದ ಸ್ಥಿತಿ. ನಾವು ಉಭಯ ದೇಶಗಳ ಜತೆ ಮಾತುಕತೆ ನಡೆಸಲಿದ್ದೇವೆ ಎಂದು ಚುನಾವಣಾ ಪ್ರಚಾರ ರ್ಯಾಲಿಗೆ ಮುನ್ನ ಅವರು ಹೇಳಿದ್ದಾರೆ.

ಈ ಮಧ್ಯೆ ಪಿಎಲ್‌ಎ ಗಡಿ ಸಂಘರ್ಷ ಉಲ್ಬಣವಾಗುವಂತೆ ಮಾಡಿದೆ. ನಾವು ಇದನ್ನು ಇಂದು ವಿಶ್ವದ ಅತಿಹೆಚ್ಚು ಜನಸಂಖ್ಯೆಯ ಪ್ರಜಾಪ್ರಭುತ್ವ ದೇಶದಲ್ಲಿ ನೋಡಿದ್ದೇವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮೈಕೆಲ್ ರಿಚರ್ಡ್ ಪೊಂಪೆಯೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News