ಎಚ್ಚರ… ಕೊರೋನ ಮಾಹಿತಿ ಹೆಸರಲ್ಲಿ ಇಂದು ಬೃಹತ್ ಸೈಬರ್ ದಾಳಿ ಸಂಭವ

Update: 2020-06-21 07:54 GMT

ಹೊಸದಿಲ್ಲಿ: ಕೋವಿಡ್-19 ಅಧಿಕೃತ ಮಾಹಿತಿ ನೀಡುವ ನೆಪದಲ್ಲಿ ರವಿವಾರ ವೈಯಕ್ತಿಕ ದತ್ತಾಂಶ ಮತ್ತು ಹಣಕಾಸು ಮಾಹಿತಿಗೆ ಕನ್ನ ಹಾಕುವ ಬೃಹತ್ ಸೈಬರ್ ದಾಳಿ ನಡೆಯುವ ಸಾಧ್ಯತೆ ಇದ್ದು, ಸಾರ್ವಜನಿಕರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸರ್ಕಾರ ಸಲಹೆ ಮಾಡಿದೆ.

“ಮೆಲೀಶಿಯಸ್ ಆ್ಯಕ್ಟರ್ಸ್”ಹೆಸರಿನ ದಾಳಿ ಅಭಿಯಾನ ಇಂದು ಆರಂಭವಾಗುವ ನಿರೀಕ್ಷೆ ಇದೆ.  ncov2019@gov.in-ಮೇಲ್‍ನಿಂದ ಈ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕಂಪ್ಯೂಟರ್ ಎಮರ್ಜೆನ್ಸಿ ತಂಡ ಅಥವಾ ಸಿಇಆರ್‍ ಟಿ ಟ್ವೀಟ್ ಮಾಡಿದೆ. ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಸಿಇಆರ್‍ಟಿ, ಭಾರತೀಯರನ್ನು ಸೈಬರ್ ಅಪಾಯಗಳಿಂದ ರಕ್ಷಿಸುವ ಕಾರ್ಯ ಮಾಡುತ್ತದೆ.

ಈ ಸೈಬರ್ ದಾಳಿ ಅಭಿಯಾನ ಸ್ಥಳೀಯ ಆಡಳಿತಗಳು ಕೋವಿಡ್-19 ಉಪಕ್ರಮಗಳ ಸೋಗಿನಲ್ಲಿ ನಡೆಯುವ ಸಾಧ್ಯತೆ ಇದೆ. ಇಂತಹ ಇ-ಮೇಲ್‍ಗಳನ್ನು ಸ್ವೀಕರಿಸಿದವರು ನಕಲಿ ವೆಬ್‍ಸೈಟ್‍ಗೆ ಹೋಗುವಂತೆ ಮಾಡುತ್ತದೆ. ಇದರಿಂದ ಹಾನಿಕಾರಕ ಫೈಲ್‍ಗಳು ಡೌನ್‍ಲೋಡ್ ಆಗಲಿವೆ ಅಥವಾ ನಮ್ಮ ವೈಯಕ್ತಿಕ ಮತ್ತು ಹಣಕಾಸು ಮಾಹಿತಿ ಕಳ್ಳತನವಾಗಲಿದೆ”ಎಂದು ಸಿಇಆರ್‍ಟಿ-ಇನ್ ಪ್ರಕಟಣೆ ಹೇಳಿದೆ.

ಅಧಿಕೃತ ಮಾಹಿತಿಯ ಸೋಗಿನಲ್ಲಿ ಬರುವ ಈ ಸಂದೇಶಗಳನ್ನು ಜನ ತೆರೆದು ಓದುವಂತೆ ಮಾಡುತ್ತದೆ. ಆಗ ಜನತೆ ಇಂತಹ ಅಪಾಯಕಾರಿ ಲಿಂಕ್ ಕ್ಲಿಕ್ ಮಾಡುವಂಥ ತಂತ್ರ ಹೂಡಲಾಗಿದೆ. ಇದು ಮಾಲ್‍ ವೇರ್ ಇನ್‍ ಸ್ಟಾಲ್ ಮಾಡಲು ಕಾರಣವಾಗುವುದು ಮಾತ್ರವಲ್ಲದೇ ಇಡೀ ಸಿಸ್ಟಂ ಸ್ಥಗಿತಗೊಳ್ಳಲು ಅಥವಾ ಸೂಕ್ಷ್ಮ ಮಾಹಿತಿ ಸೋರಿಕೆಗೆ ಕಾರಣವಾಗುತ್ತದೆ ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News