ಕೊಳಕೆಯಲ್ಲಿ ಎಸ್.ಡಿ.ಪಿ.ಐ. ಸಂಸ್ಥಾಪನಾ ದಿನಾಚರಣೆ
ಬಂಟ್ವಾಳ, ಜೂ.21: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ.) ಕೊಳಕೆ ಘಟಕದ ವತಿಯಿಂದ ಸಂಸ್ಥಾಪನಾ ದಿನದ ಅಂಗವಾಗಿ ಕೊಳಕೆ ಸೆಂಟರ್ ನಲ್ಲಿ ರವಿವಾರ ನಡೆಯಿತು.
ದ್ವಜಾರೋಹಣ ವನ್ನು ಎಸ್ ಡಿ ಪಿ ಐ ಕೊಳಕೆ ಅಧ್ಯಕ್ಷ ಬಾತಿಶ್ ಕೊಳಕೆ, ಕಾರ್ಯದರ್ಶಿ ರವೂಫ್ ಕೊಳಕೆ ನೆರವೇರಿಸಿದರು.
ಇದೇ ಸಂದರ್ಭ ಕೊರೋನ ಯೋಧರು, ಸಜೀಪ ಮೂಡ ಗ್ರಾಮದ 3ನೇ ವಾರ್ಡಿನ ಆಶಾ ಕಾರ್ಯಕರ್ತೆಯರಾದ ಪುಷ್ಪಲತಾ ಹಾಗೂ ಶಶಿಕಲಾರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಎಸ್.ಡಿ.ಪಿ.ಐ. ರಾಜ್ಯ ಸಮಿತಿಯ ಸದಸ್ಯ ರಿಯಾಝ್ ಫರಂಗಿಪೇಟೆ ಮಾತನಾಡಿದರು.
ಎಸ್.ಡಿ.ಪಿ.ಐ. ಸಜೀಪ ಮೂಡ ಮುನ್ನೂರು ಘಟಕದ ಅಧ್ಯಕ್ಷ ಫಾರೂಕ್, ಆಲಾಡಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಸಲೀಂ ಆಲಾಡಿ, ಸದಸ್ಯರಾದ ರವೂಫ್ ಕಲಾಯಿ, ಕೊಳಕೆ ಮುಹಿಯುದ್ದೀನ್ ಜುಮಾ ಮಸೀದಿಯ ಕೋಶಾಧಿಕಾರಿ ಫಾರೂಕ್ ಕೊಳಕೆ, ಉಪಾಧ್ಯಕ್ಷ ಸಿದ್ದೀಕ್ ಕೊಳಕೆ, ಎಸ್.ವೈ.ಎಸ್. ಕೊಳಕೆ ಘಟಕದ ಅಧ್ಯಕ್ಷ ಹಮೀದ್ ಹಾಜಿ, ಕಾರ್ಯದರ್ಶಿಎಸ್.ಕೆ.ಮುಹಮ್ಮದ್ ಉಪಸ್ಥಿತರಿದ್ದರು.
ಎಸ್.ಡಿ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲಿಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.