ತಲಪಾಡಿ: ಎಸ್.ಡಿ.ಪಿ.ಐ. ಸಂಸ್ಥಾಪನಾ ದಿನಾಚರಣೆ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ, ಸಸಿ ವಿತರಣೆ
Update: 2020-06-21 16:39 IST
ಬಂಟ್ವಾಳ, ಜೂ.21: ಎಸ್.ಡಿ.ಪಿ.ಐ.ತಲಪಾಡಿ ಘಟಕದ ವತಿಯಿಂದ ರವಿವಾರ ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ತಲಪಾಡಿ ಘಟಕದ ಅಧ್ಯಕ್ಷ ಶಾಹುಲ್ ತಲಪಾಡಿ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್.ಡಿ.ಪಿ.ಐ. ಬಂಟ್ವಾಳ ಪುರಸಭಾ ಅಧ್ಯಕ್ಷ ಮೂನಿಶ್ ಅಲಿ, ಪಾಪ್ಯುಲರ್ ಫ್ರಂಟ್ ಬಿ.ಸಿ.ರೋಡ್ ವಲಯ ಅಧ್ಯಕ್ಷ ಅಕ್ಬರ್ ಅಲಿ ಪಕ್ಷ ಮಾತನಾಡಿದರು. ಇದೇ ಸಂದರ್ಭ ಭಾರತ -ಚೀನಾ ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಬಂಟ್ವಾಳ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಉಬೈದುಲ್ಲಾ, ಲತೀಫ್ ಬಿ.ಸಿ.ರೋಡ್, ಇದಿನಬ್ಬ, ಮುಶ್ತಾಕ್, ಹಫೀಝ್, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳಸ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು.
ಅಶ್ಪಾಕ್ ಪೊನ್ನೋಡಿ ಕಾರ್ಯಕ್ರಮ ನಿರೂಪಿಸಿದರು. ಸಾದಿಕ್ ವಂದಿಸಿದರು.