​ಮುಡಿಪು: ಕ್ಲಪ್ತ ಸಮಯಕ್ಕೆ ಚಲಿಸದ ಸರಕಾರಿ ಬಸ್‌ಗಳು; ಹೋರಾಟ ಸಮಿತಿ ಆರೋಪ

Update: 2020-06-21 11:51 GMT

ಮಂಗಳೂರು, ಜೂ.21: ಕೊರೋನ ಹಿನ್ನೆಲೆಯಲ್ಲಿ ವಿಧಿಸಲ್ಪಟ್ಟ ಲಾಕ್‌ಡೌನ್ ಸಡಿಲಿಸಲ್ಪಟ್ಟರೂ ಕೂಡ ಮಂಗಳೂರು-ಮುಡಿಪು ರೂಟಿನ ಸರಕಾರಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಚಲಿಸದೆ ಪ್ರಯಾಣಿಕರಿಗೆ ಅನ್ಯಾಯ ಎಸಗುತ್ತಿದೆ ಎಂದು ಕೆಎಸ್ಸಾರ್ಟಿಸಿ ಹೋರಾಟ ಸಮಿತಿ ಆರೋಪಿಸಿದೆ.

ಮುಡಿಪು ಪರಿಸರಕ್ಕೆ 9 ನರ್ಮ್ ಬಸ್‌ಗಳಿವೆ. ಈ ಬಸ್‌ಗಳು ದಿನಂಪ್ರತಿ 6ರಂತೆ ದಿನಕ್ಕೆ 54 ಟ್ರಿಪ್ ಓಡಾಟ ನಡೆಸಬೇಕಿತ್ತು. ಆದರೆ ಎಲ್ಲಾ ಬಸ್‌ಗಳು ಒಂದೊಂದು ಟ್ರಿಪ್ ಕಡಿತಗೊಳಿಸುವ ಮೂಲಕ ನಿಯಮ ಉಲ್ಲಂಘಿಸುತ್ತಿವೆ. ಇದೀಗ ಕೊರೋನ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಸಡಿಲಿಕೆಯಾದರೂ ಕೂಡ 9ರ ಪೈಕಿ ಕೇವಲ 3 ಬಸ್ ಮಾತ್ರ ಚಲಿಸುತ್ತಿವೆ. ಅದೂ ಕ್ಲಪ್ತ ಸಮಯಕ್ಕೆ ಚಲಿಸದೆ ತಮಗೆ ಬೇಕಾದ ಸಮಯದಲ್ಲಿ ಚಲಿಸಿ ಪ್ರಯಾಣಿಕರ ಉಪಯೋಗಕ್ಕೆ ಇಲ್ಲದಂತಾಗಿದೆ. ದಿನನಿತ್ಯ ಪ್ರಯಾಣಿಸುವವರು ಪಾಸ್ ಮಾಡಿಕೊಂಡಿದ್ದು, ಬಸ್ಸಿಗಾಗಿ ಕಾದು ಕಾದು ಸುಸ್ತಾಗುವಂತಹ ಪ್ರಮೇಯವೂ ಇದೀಗ ಎದುರಾಗಿದೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ಟ್ರಿಪ್ ಕಡಿತಗೊಳಿಸಲಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೋರಾಟ ಸಮಿತಿಯ ಸಂಚಾಲಕರಾದ ಇಸ್ಮಾಯೀಲ್ ಮುಡಿಪು ಮತ್ತು ಎಂಎಸ್.ರಾಘವೇಂದ್ರ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಕೆಎಸ್ಸಾರ್ಟಿಸಿ ನಿಯಂತ್ರಣಾಧಿಕಾರಿ ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News